Select Your Language

Notifications

webdunia
webdunia
webdunia
webdunia

ಐಪಿಎಲ್ 14: ಯಾವ ತಂಡಕ್ಕೆ ಯಾರು ಕೋಚ್? ಇಲ್ಲಿದೆ ಮಾಹಿತಿ

ಐಪಿಎಲ್ 14: ಯಾವ ತಂಡಕ್ಕೆ ಯಾರು ಕೋಚ್? ಇಲ್ಲಿದೆ ಮಾಹಿತಿ
ದುಬೈ , ಶುಕ್ರವಾರ, 17 ಸೆಪ್ಟಂಬರ್ 2021 (08:50 IST)
ದುಬೈ: ಐಪಿಎಲ್ 14 ಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಯಾವ ತಂಡಕ್ಕೆ ಯಾರು ಕೋಚ್ ಎಂಬ ಮಾಹಿತಿಯನ್ನು ನೋಡೋಣ.


ರಾಯಲ್ ಚಾಲೆಂಜರ್ಸ್ ಬೆಂಗಳೂರು: ತಂಡದ ಕೋಚ್ ಆಗಿದ್ದ ಸಿಮನ್ ಕಾಟಿಚ್ ರಾಜೀನಾಮೆ ನೀಡಿದ ಬೆನ್ನಲ್ಲೇ ಮೈಕ್ ಹಸನ್ ಮುಖ್ಯ ಕೋಚ್ ಆಗಿ ಬಡ್ತಿ ಪಡೆದಿದ್ದಾರೆ. ಐಪಿಎಲ್ 14 ರ ಎರಡನೇ ಹಂತದಲ್ಲಿ ಅವರೇ ಕೋಚ್ ಆಗಿ ಮುಂದುವರಿಯಲಿದ್ದಾರೆ.

ಕಿಂಗ್ಸ್ ಪಂಜಾಬ್: ಕನ್ನಡಿಗ ಕೆಎಲ್ ರಾಹುಲ್ ನಾಯಕರಾಗಿರುವ ಪಂಜಾಬ್ ತಂಡಕ್ಕೆ ಕನ್ನಡಿಗ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಕೋಚ್. ರಾಹುಲ್-ಕುಂಬ್ಳೆ ಜೋಡಿ ಇದುವರೆಗೆ ಯಶಸ್ವೀ ಪ್ರದರ್ಶನ ಕಾಯ್ದುಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್: ಈ ತಂಡಕ್ಕೆ ಧೋನಿಯೇ ಆಧಾರ ಸ್ತಂಬ. ಹಾಗಿದ್ದರೂ ಕೋಚ್ ಎಂದು ಇರಲೇಬೇಕಲ್ಲ? 2009 ರಿಂದಲೂ ಧೋನಿಗೆ ಜೊತೆಯಾಗಿರುವುದು ಕೋಚ್ ಸ್ಟೀಫನ್ ಫ್ಲೆಮಿಂಗ್. ಈಗಲೂ ಅವರೇ ಮುಂದುವರಿದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಮುಂಬೈ ಇಂಡಿಯನ್ಸ್ ಬಳಿಕ ಡೆಲ್ಲಿ ತಂಡಕ್ಕೆ ಕೋಚ್ ಆಗಿ ಸೇರಿಕೊಂಡಿದ್ದಾರೆ. ಈಗಲೂ ಅವರೇ ಮುಂದುವರಿದಿದ್ದಾರೆ.

ಮುಂಬೈ ಇಂಡಿಯನ್ಸ್: 2018 ರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಶ್ರೀಲಂಕಾ ಬ್ಯಾಟಿಂಗ್ ದಿಗ್ಗಜ ಮಹೇಲ ಜಯವರ್ಧನೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್: ಈ ತಂಡಕ್ಕೆ ನಾಯಕನ ಜೊತೆಗೆ ಕೋಚ್ ಕೂಡಾ ವಿದೇಶೀಯರೇ. 2019 ರಿಂದ ಟ್ರವರ್ ಬೇಲಿಸಿಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜಸ್ಥಾನ್ ರಾಯಲ್ಸ್: ಶ್ರೀಲಂಕಾದ ದಿಗ್ಗಜ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕುಮಾರ ಸಂಗಕ್ಕಾರ ಕಳೆದ ವರ್ಷದಿಂದ ತಂಡದ ಮುಖ್ಯ ನಿರ್ದೇಶಕ ಮತ್ತು ಕೋಚ್ ಆಗಿ ಕಾರ್ಯನಿರ್ವಹಣೆ ಪ್ರಾರಂಭ ಮಾಡಿದ್ದಾರೆ.

ಕೋಲ್ಕೊತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡದ ಮಾಜಿ ನಾಯಕರಾಗಿದ್ದ ಬ್ರೆಂಡಮ್ ಮೆಕ್ಕಲಮ್ ಈಗ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂಡದ ಬಗ್ಗೆ ಚೆನ್ನಾಗಿ ಬಲ್ಲ ಮೆಕ್ಕಲಮ್ 2020 ರಿಂದ ತಂಡದ ಕೋಚ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡಿದ ವಿರಾಟ್ ಕೊಹ್ಲಿ