ದುಬೈ: ಐಪಿಎಲ್ 14 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿರುವ ಕಿಂಗ್ಸ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ಕನ್ನಡ ಹಾಡು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಎಸ್ ಪಿ ಬಾಲಸುಬ್ರಮಣ್ಯಂ ಅಂದರೆ ಅನಿಲ್ ಕುಂಬ್ಳೆಯ ಅಚ್ಚುಮೆಚ್ಚಿನ ಹಾಡುಗಾರ. ದುಬೈನಲ್ಲಿ ಆಟಗಾರರನ್ನು ರಂಜಿಸಲು ಕುಂಬ್ಳೆ ಎಸ್ ಪಿಬಿ ಹಾಡಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಮಾಮರವೆಲ್ಲೋ ಕೋಗಿಲೆಯೆಲ್ಲೋ ಎಂಬ ಹಾಡನ್ನು ಹಾಡಿ ರಂಜಿಸಿದ್ದಾರೆ.
ಅಪ್ಪಟ ಕನ್ನಡಿಗರಾಗಿರುವ ಅನಿಲ್ ಕುಂಬ್ಳೆ ಪಂಜಾಬ್ ತಂಡದ ಆಟಗಾರರ ಮುಂದೆ ಕನ್ನಡ ಹಾಡು ಸುಶ್ರಾವ್ಯವಾಗಿ ಹಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.