ದುಬೈ: ಐಪಿಎಲ್ 14 ರ ಎರಡನೇ ಹಂತದ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದ್ದು, ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.
ಆದರೆ ಈ ಪಂದ್ಯಕ್ಕೆ ಧೋನಿ ನೇತೃತ್ವದ ಚೆನ್ನೈ ತಂಡಕ್ಕೆ ಸ್ಟಾರ್ ಆಟಗಾರ ಸ್ಯಾಮ್ ಕ್ಯುರೇನ್ ಅನುಪಸ್ಥಿತಿ ಕಾಡಲಿದೆ. ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕ್ಯುರೇನ್ ನಿನ್ನೆಯಷ್ಟೇ ಯುಎಇಗೆ ಬಂದಿಳಿದಿದ್ದಾರೆ.
ಅವರು ಯುಎಇಗೆ ಬಂದ ಮೇಲೆ ಕಡ್ಡಾಯ ಆರು ದಿನಗಳ ಕ್ವಾರಂಟೈನ್ ಮುಗಿಸಿದರಷ್ಟೇ ತಂಡವನ್ನು ಕೂಡಿಕೊಳ್ಳಬಹುದಾಗಿದೆ. ಹೀಗಾಗಿ ಮೊದಲ ಪಂದ್ಯದಿಂದ ಸ್ಯಾಮ್ ಹೊರಗುಳಿಯಲಿದ್ದಾರೆ. ಇದು ಸಿಎಸ್ ಕೆ ದೊಡ್ಡ ಹೊಡೆತ ನೀಡಲಿದೆ.