Publish Date: Sun, 19 Sep 2021 (11:54 IST)
Updated Date: Sun, 19 Sep 2021 (08:56 IST)
ಮುಂಬೈ: ಟೀಂ ಇಂಡಿಯಾದ ಪ್ರಶ್ನಾತೀತ ನಾಯಕರಾಗಿದ್ದ ಧೋನಿ ಮೂರೂ ಮಾದರಿಯ ಕ್ರಿಕೆಟ್ ನಾಯಕತ್ವಕ್ಕೆ ಒಟ್ಟಿಗೇ ರಾಜೀನಾಮೆ ನೀಡಿರಲಿಲ್ಲ. ಈಗ ವಿರಾಟ್ ಕೊಹ್ಲಿ ಕೂಡಾ ಅದೇ ಹಾದಿ ಹಿಡಿಯುತ್ತಿದ್ದಾರೆ.
ಧೋನಿ ಮೊದಲು ಟೆಸ್ಟ್ ತಂಡಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಟಿ20, ಏಕದಿನ ತಂಡದಿಂದ ಹೊರಬಂದರು. ಈಗ ವಿರಾಟ್ ಕೊಹ್ಲಿ ಕೂಡಾ ಅವರದೇ ಹಾದಿ ಹಿಡಿಯುವ ಸುಳಿವು ನೀಡಿದ್ದಾರೆ.
ಟಿ20 ನಾಯಕತ್ವ ತ್ಯಜಿಸಿರುವ ಕೊಹ್ಲಿ ಆಟಗಾರನಾಗಿ ಮಾತ್ರ ಮುಂದುವರಿಯುವುದಾಗಿ ಹೇಳಿದ್ದಾರೆ. 32 ವರ್ಷ ವಯಸ್ಸಿನ ಕೊಹ್ಲಿ ಕೆಲವು ಸಮಯದ ಬಳಿಕ ಏಕದಿನ ಪಂದ್ಯದ ನಾಯಕತ್ವವನ್ನೂ ತ್ಯಜಿಸಬಹುದು. ಬಳಿಕ ಟೆಸ್ಟ್, ಹೀಗೇ ಒಂದಾದ ಮೇಲೊಂದು ಫಾರ್ಮ್ಯಾಟ್ ನ ನಾಯಕತ್ವ ತ್ಯಜಿಸಬಹುದು. ಈಗ ಟಿ20 ತಂಡಕ್ಕೆ ಹೊಸ ನಾಯಕ ಬರಲಿದ್ದು, ಆ ನಾಯಕ ಕ್ಲಿಕ್ ಆದರೆ ಬಳಿಕ ಏಕದಿನ ತಂಡಕ್ಕೂ ಅವರೇ ನಾಯಕರಾಗಬಹುದು. ಇದೇ ರೀತಿ ಟೀಂ ಇಂಡಿಯಾವನ್ನು ಸುರಕ್ಷಿತ ಕೈಗಳಿಗೊಪ್ಪಿಸಿ ಸಂಪೂರ್ಣವಾಗಿ ನಾಯಕತ್ವದ ಜವಾಬ್ಧಾರಿಯಿಂದ ಕೊಹ್ಲಿ ಹೊರಬರುವ ನಿರೀಕ್ಷೆಯಿದೆ.