ದುಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ವಿರಾಟ್ ಕೊಹ್ಲಿ ಈಗ ಆರ್ ಸಿಬಿ ನಾಯಕತ್ವಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಐಪಿಎಲ್ 14 ರ ಎರಡನೇ ಹಂತದ ಪಂದ್ಯಗಳು ಆರ್ ಸಿಬಿಯಲ್ಲಿ ನಾಯಕನಾಗಿ ನನ್ನ ಕೊನೆಯ ಕೂಟವಾಗಲಿದೆ. ಇದಾದ ಬಳಿಕ ನಾನು ಆರ್ ಸಿಬಿಯಲ್ಲಿ ನಿವೃತ್ತಿಯವರೆಗೂ ಕೇವಲ ಆಟಗಾರನಾಗಿ ಮುಂದುವರಿಯಲಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಇಂದಿನ ಕೆಕೆಆರ್ ಪಂದ್ಯಕ್ಕೆ ಮೊದಲು ಇದು ಅಭಿಮಾನಿಗಳಿಗೆ ಸಿಕ್ಕಿದ ದೊಡ್ಡ ಶಾಕ್ ಆಗಿದೆ. ಇದುವರೆಗೆ ಕೊಹ್ಲಿ ನಾಯಕತ್ವದಲ್ಲಿ ಆರ್ ಸಿಬಿ ಟೈಟಲ್ ಗೆಲ್ಲಲು ಸಾಧ‍್ಯವಾಗಿಲ್ಲ. ಈ ಬಾರಿ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರ್ ಸಿಬಿ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಬಹುದು ಎಂಬ ನಿರೀಕ್ಷೆಯಿದೆ.