Select Your Language

Notifications

webdunia
webdunia
webdunia
webdunia

ನನ್ನ ಕೊನೆಯವರೆಗೂ ಆರ್ ಸಿಬಿಗಾಗಿಯೇ ಮೀಸಲು: ವಿರಾಟ್ ಕೊಹ್ಲಿ

ನನ್ನ ಕೊನೆಯವರೆಗೂ ಆರ್ ಸಿಬಿಗಾಗಿಯೇ ಮೀಸಲು: ವಿರಾಟ್ ಕೊಹ್ಲಿ
ದುಬೈ , ಸೋಮವಾರ, 20 ಸೆಪ್ಟಂಬರ್ 2021 (09:40 IST)
ದುಬೈ: ಕಳೆದ 8 ವರ್ಷಕ್ಕೂ ಹೆಚ್ಚು ಸಮಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ  ಈಗ ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.


ಈ ಐಪಿಎಲ್ ಅವರ ನಾಯಕತ್ವದ ಕೊನೆಯ ಐಪಿಎಲ್ ಆಗಲಿದೆ. ಇದು ಅಭಿಮಾನಿಗಳಿಗೆ ಶಾಕ್ ಉಂಟು ಮಾಡಿದೆ. ಹಾಗಿದ್ದರೆ ಮುಂದೆ ಆರ್ ಸಿಬಿಯಲ್ಲಿ ಕೊಹ್ಲಿಯ ಆಟವಿರೋದಿಲ್ವಾ ಎಂಬ ಪ್ರಶ್ನೆಗೆ ಅವರೇ ಸಮಾಧಾನ ಮಾಡಿದ್ದಾರೆ.

ನನ್ನ ಕೊನೆಯ ಉಸಿರುವರೆಗೂ ಆರ್ ಸಿಬಿಗೇ ಬೆಂಬಲ ಎಂದಿದ್ದಾರೆ. ನನ್ನ ವೃತ್ತಿ ಜೀವನದ ಕೊನೆಯವರೆಗೂ ಆರ್ ಸಿಬಿ ಪರವೇ ಆಡುತ್ತೇನೆ ಎಂದಿದ್ದಾರೆ. ಇದು ಸುಲಭ ನಿರ್ಧಾರವಾಗಿರಲಿಲ್ಲ. ನನಗೆ ಬೆಂಬಲಿಸಿದ ಪ್ರತಿಯೊಬ್ಬ ಅಭಿಮಾನಿಗಳಿಗೂ ಧನ್ಯವಾದಗಳು. ಆರ್ ಸಿಬಿ ಕುಟುಂಬ ನನ್ನ ಹೃದಯಕ್ಕೆ ಹತ್ತಿರವಾದುದು. ನನ್ನ ವೃತ್ತಿ ಜೀವನದ ಕೊನೆಯ ಪಂದ್ಯವನ್ನೂ ಆರ್ ಸಿಬಿಗಾಗಿಯೇ ಆಡುತ್ತೇನೆ’ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿಯ ಈ ಮಾತು ಆರ್ ಸಿಬಿ ಅಭಿಮಾನಿಗಳನ್ನು ಮತ್ತಷ್ಟು ಭಾವುಕರಾಗಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಕೆಕೆಆರ್ ಸವಾಲು