Select Your Language

Notifications

webdunia
webdunia
webdunia
webdunia

ಜೋಕ್ ಮಾಡಿದ ಸೆಹ್ವಾಗ್ ಗೆ ಸಿಎಸ್ ಕೆ ಫ್ಯಾನ್ಸ್ ತಿರುಗೇಟು

ಜೋಕ್ ಮಾಡಿದ ಸೆಹ್ವಾಗ್ ಗೆ ಸಿಎಸ್ ಕೆ ಫ್ಯಾನ್ಸ್ ತಿರುಗೇಟು
ದುಬೈ , ಸೋಮವಾರ, 20 ಸೆಪ್ಟಂಬರ್ 2021 (10:55 IST)
ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಪಡೆಯ ಬ್ಯಾಟಿಂಗ್ ಆರಂಭಿಕ ಕುಸಿತಕ್ಕೊಳಗಾಗಿತ್ತು. ಇದನ್ನು ನೋಡಿ ಮಾಜಿ ಕ್ರಿಕೆಟಿಗ ಸೆಹ್ವಾಗ್ ಸಿಎಸ್ ಕೆ ತಂಡವನ್ನು ಜೋಕ್ ಮಾಡಿದ್ದರು.


ರನ್ ಗಳಿಸುವುದಕ್ಕಿಂತ ವೇಗವಾಗಿ ವಿಕೆಟ್ ಉದುರುತ್ತಿರುವುದನ್ನು ನೋಡಿ ಸೆಹ್ವಾಗ್ ‘ಇದೇನು ಇಲ್ಲಿ ಕ್ರಿಕೆಟ್ ನಡೀತಾ ಇದೆಯಾ ಇಲ್ಲಾ ಹಾಕಿ ನಡೀತಿದ್ಯಾ?’ ಎಂದು ಜೋಕ್ ಮಾಡಿದ್ದರು.

ಇದು ಸಿಎಸ್ ಕೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಋತುರಾಜ್ ಗಾಯಕ್ ವಾಡ್ ಅದ್ಭುತ ಬ್ಯಾಟಿಂಗ್ ನಿಂದ ತಂಡ ಗೆದ್ದ ಮೇಲೆ ಅಭಿಮಾನಿಗಳು ಸೆಹ್ವಾಗ್ ಗೆ ತಿರುಗೇಟು ನೀಡಿದ್ದಾರೆ. ಕೆಲವೊಮ್ಮೆ ಕ್ರಿಕೆಟ್ ನ್ನೂ ಹಾಕಿಯಂತೆ ಆಡಬೇಕಾಗುತ್ತದೆ ಸರ್ ಎಂದು ಕೆಲವರು ಟಾಂಗ್ ಕೊಟ್ಟರೆ ಮತ್ತೆ ಕೆಲವರು ಇಂತಹ ಕಾಮೆಂಟ್ ಮಾಡಿ ನಿಮ್ಮ ಮೇಲಿನ ಗೌರವ ಕಳೆದುಕೊಳ್ಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಕೊನೆಯವರೆಗೂ ಆರ್ ಸಿಬಿಗಾಗಿಯೇ ಮೀಸಲು: ವಿರಾಟ್ ಕೊಹ್ಲಿ