Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಕಿಚ್ಚ ಸುದೀಪ್ ನ ಮೋಡಿ

ಐಪಿಎಲ್ ನಲ್ಲಿ ಕಿಚ್ಚ ಸುದೀಪ್ ನ ಮೋಡಿ
ದುಬೈ , ಸೋಮವಾರ, 20 ಸೆಪ್ಟಂಬರ್ 2021 (10:20 IST)
ದುಬೈ: ಐಪಿಎಲ್ ವೀಕ್ಷಿಸಲು ದುಬೈಗೆ ತೆರಳಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಪತ್ನಿ ಪ್ರಿಯಾ ಸುದೀಪ್ ಜೊತೆಗೆ ದುಬೈಗೆ ತೆರಳಿರುವ ಸುದೀಪ್ ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ಮೈದಾನದಲ್ಲಿ ವೀಕ್ಷಿಸಿದ್ದಾರೆ. ಈ ವೇಳೆ ಅವರ ಸ್ನೇಹಿತರೂ ಜೊತೆಯಾಗಿದ್ದಾರೆ.

ದುಬೈನಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ್ ರನ್ನು ಅಲ್ಲಿನ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇಂದು ನಡೆಯಲಿರುವ ಆರ್ ಸಿಬಿ ಪಂದ್ಯವನ್ನೂ ಸುದೀಪ್ ವೀಕ್ಷಿಸುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ರಾತ್ರಿ ಬಗ್ಗೆ ಹೇಳಿಕೊಂಡ ರಶ್ಮಿಕಾ ಮಂದಣ್ಣ