Publish Date: Mon, 20 Sep 2021 (10:01 IST)
Updated Date: Mon, 20 Sep 2021 (10:14 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಸೈಮಾ ಅವಾರ್ಡ್ ನಲ್ಲಿ ಎರಡೆರಡು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಖುಷಿಗೆ ಅವರು ಇನ್ ಸ್ಟಾಗ್ರಾಂನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ಕಳೆದ ರಾತ್ರಿ ನನಗೆ ವಿಶೇಷವಾಗಿತ್ತು. ಯಜಮಾನ ಮತ್ತು ಡಿಯರ್ ಕಾಮ್ರೇಡ್ ಅಭಿನಯಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಪ್ರಶಸ್ತಿ. ಅದೂ ಒಂದೇ ದಿನ. ಸೈಮಾಗೆ ಧನ್ಯವಾದಗಳು. ನನ್ನನ್ನು ಒಬ್ಬ ನಟಿಯಾಗಿ ರೂಪಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಯಜಮಾನ ಮತ್ತು ಡಿಯರ್ ಕಾಮ್ರೇಡ್ ಚಿತ್ರದ ನಟನೆಗಾಗಿ ರಶ್ಮಿಕಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದೇ ಖುಷಿಗೆ ಅವರು ತಮ್ಮನ್ನು ಬೆಳೆಸಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ.