Select Your Language

Notifications

webdunia
webdunia
webdunia
Sunday, 13 April 2025
webdunia

ಹೆತ್ತವರ ವಿರುದ್ಧವೇ ದೂರು ಕೊಟ್ಟ ತಮಿಳು ನಟ ವಿಜಯ್

ವಿಜಯ್
ಚೆನ್ನೈ , ಸೋಮವಾರ, 20 ಸೆಪ್ಟಂಬರ್ 2021 (09:50 IST)
ಚೆನ್ನೈ: ತಮಿಳು ಸ್ಟಾರ್ ನಟ ವಿಜಯ್ ತಮ್ಮ ತಂದೆ-ತಾಯಿ ಸೇರಿದಂತೆ 11 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

 

ರಾಜಕೀಯ ವಿಚಾರದಲ್ಲಿ ತಮ್ಮ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ತಂದೆ-ತಾಯಿ ಸೇರಿದಂತೆ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಸೆಪ್ಟೆಂಬರ್ 27 ರಂದು ವಿಜಯ್ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ವಿಜಯ್ ತಂದೆ ಚಂದ್ರಶೇಖರ್ ವಿಜಯ್ ಅಭಿಮಾನಿ ಬಳಗ ‘ವಿಜಯ್ ಮಕ್ಕಳ್ ಇಯಕಂ’ ರಾಜಕೀಯ ಪಕ್ಷವೆಂದು ಘೋಷಿಸಿದ್ದರು. ಇದು ವಿಜಯ್ ಅಸಮಾಧಾನಕ್ಕೆ ಕಾರಣವಾಗಿದೆ. ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಯಾವುದೇ ಪಕ್ಷಕ್ಕೂ ನನ್ನ ಹೆಸರು ಸೇರಿಸಬೇಡಿ. ನನ್ನ ಹೆಸರು ದುರ್ಬಳಕೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಡ್ ಬುಷ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸೇರ್ಪಡೆ