ಬೆಂಗಳೂರು: ಥಿಯೇಟರ್ ಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡದೇ ಇರುವುದು ಚಿತ್ರರಂಗವನ್ನು ಹತಾಶೆಗೆ ದೂಡಿದೆ.
ಕಳೆದ ಎರಡು ವರ್ಷಗಳಿಂದ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರರಂಗ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಕಳೆದ ವಾರವೇ ನಟ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಸರ್ಕಾರಕ್ಕೆ ಶೇ.100 ಪ್ರೇಕ್ಷಕರಿಗೆ ಅವಕಾಶ ಕೊಡಲು ಮನವಿ ಮಾಡಿದ್ದರು.
ಆದರೆ ರಾಜ್ಯ ಸರ್ಕಾರ ಇದುವರೆಗೆ ಈ ಬಗ್ಗೆ ತೀರ್ಮಾನ ಮಾಡಿಲ್ಲ. ಅಗತ್ಯವಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತೇವೆ. ನಮಗೆ ಸಂಪೂರ್ಣ ತೆರೆಯಲು ಅವಕಾಶ ಕೊಡಿ ಎಂದು ಚಿತ್ರಮಂದಿರ ಮಾಲಿಕರೂ ಕೇಳುತ್ತಿದ್ದಾರೆ. ಆದರೆ ಇದುವರೆಗೆ ಚಿತ್ರರಂಗಕ್ಕೆ ಸರ್ಕಾರದಿಂದ ಸೂಕ್ತ ಭರವಸೆ ಸಿಕ್ಕಿಲ್ಲ. ಇನ್ನೇನು ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬಂದಿದ್ದು, ಅಕ್ಟೋಬರ್ ನಲ್ಲಿ ಕೆಲವು ಸಿನಿಮಾ ಬಿಡುಗಡೆ ಘೋಷಣೆಯಾಗಿದೆ. ಇದಕ್ಕೂ ಮೊದಲೇ ಶೇ.100 ಪ್ರೇಕ್ಷಕರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಚಿತ್ರರಂಗದ್ದು.