ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾವಂತ ಯುವ ನಟ ದೀಕ್ಷಿತ್ ಶೆಟ್ಟಿ ಈಗ ತೆಲುಗು ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ.
ಕಿರುತೆರೆಯಿಂದ ಹಿರಿತೆರೆಗೆ ಬಂದು ದಿಯಾ ಸಿನಿಮಾ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಸ್ಪುರದ್ರೂಪಿ ನಟ ದೀಕ್ಷಿತ್ ಈಗ ತೆಲುಗಿನಲ್ಲಿ ಮೀಟ್ ಕ್ಯೂಟ್ ಎನ್ನುವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ನಟ ನಾನಿ ಸಹೋದರಿ ದೀಪ್ತಿ ಘಂಟಾ ನಿರ್ದೇಶನದ ಸಿನಿಮಾ ಇದಾಗಿದೆ. ಆಕಾಂಕ್ಷ ಸಿಂಗ್ ನಾಯಕಿಯಾಗಿದ್ದಾರೆ. ದಿಯಾ ಸಿನಿಮಾ ತೆಲುಗಿಗೆ ಡಬ್ ಆಗಿತ್ತು. ಈ ಸಿನಿಮಾ ನೋಡಿ ದೀಕ್ಷಿತ್ ನಟನೆ ಮೆಚ್ಚಿ ಅವರಿಗೆ ಈ ಅವಕಾಶ ಸಿಕ್ಕಿದೆಯಂತೆ.