Select Your Language

Notifications

webdunia
webdunia
webdunia
webdunia

ಆನ್ ಲೈನ್ ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ 8 ರ ಸ್ಪರ್ಧಿ

ಆನ್ ಲೈನ್ ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ 8 ರ ಸ್ಪರ್ಧಿ
ಬೆಂಗಳೂರು , ಭಾನುವಾರ, 19 ಸೆಪ್ಟಂಬರ್ 2021 (09:20 IST)
ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಕನ್ನಡ ಬಿಗ್ ಬಾಸ್ 8 ನೇ ಆವೃತ್ತಿಯ ಸ್ಪರ್ಧಿ ವೈಜಯಂತಿ ವಾಸುದೇವ ಅಡಿಗ ಆನ್ ಲೈನ್ ನಲ್ಲೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.


ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಪುತ್ರಿ ವೈಜಯಂತಿ ಮದುವೆಯಾಗುವ ಹುಡುಗ ಅಮೆರಿಕಾದಲ್ಲಿದ್ದಾರೆ. ಹೀಗಾಗಿ ಆನ್ ಲೈನ್ ನಲ್ಲೇ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರೂ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ವೈಜಯಂತಿ ಒಂದೇ ವಾರದಲ್ಲಿ ಮನೆಯಿಂದ ಹೊರಬಂದಿದ್ದರು. ‘ಅಮ್ಮಚ್ಚಿ ಎಂಬ ನೆನಪು’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೈಮಾ ಅವಾರ್ಡ್ ಪ್ರಕಟ: ಗೆದ್ದವರ ಪಟ್ಟಿ ಇಲ್ಲಿದೆ