Select Your Language

Notifications

webdunia
webdunia
webdunia
webdunia

ಸಾಹಸಸಿಂಹ ವಿಷ್ಣುವರ್ಧನ್ ಬರ್ತ್ ಡೇ: ಮೈಸೂರಿನಲ್ಲಿ ಪೂಜೆ

ಸಾಹಸಸಿಂಹ ವಿಷ್ಣುವರ್ಧನ್ ಬರ್ತ್ ಡೇ: ಮೈಸೂರಿನಲ್ಲಿ ಪೂಜೆ
ಬೆಂಗಳೂರು , ಶುಕ್ರವಾರ, 17 ಸೆಪ್ಟಂಬರ್ 2021 (10:05 IST)
ಬೆಂಗಳೂರು: ನಾಳೆ ಅಂದರೆ ಸೆಪ್ಟೆಂಬರ್ 18 ರಂದು ಸಾಹಸಸಿಂಹ ವಿಷ್ಣುವರ್ಧನ್ ಜನ್ಮದಿನ. ಈ ದಿನವನ್ನು ಅವರ ಕುಟುಂಬಸ್ಥರು, ಅಭಿಮಾನಿಗಳು ವಿಶೇಷವಾಗಿ ಆಚರಿಸಲಿದ್ದಾರೆ.


ವಿಷ್ಣು ಕುಟುಂಬಸ್ಥರು ನಾಳೆ ಮೈಸೂರಿನಲ್ಲಿ ಅವರ ಸಮಾಧಿ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಲಿದ್ದು, ಪೂಜೆ ಸಲ್ಲಿಸಲಿದೆ. ನಾಳೆ ನಟಿ ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ ವರ್ಧನ್, ಅಳಿಯ ಅನಿರುದ್ಧ್ ಸೇರಿದಂತೆ ಕುಟುಂಬಸ್ಥರು ಮೈಸೂರಿನಲ್ಲಿರಲಿದ್ದಾರೆ.

ಇನ್ನು, ಅವರ ಅಭಿಮಾನಿಗಳಿಂದ ಎಂದಿನಂತೆ ರಕ್ತದಾನ ಸೇರಿದಂತೆ ಸಮಾಜಮುಖೀ ಕೆಲಸಗಳು ನಡೆಯಲಿದೆ. 1950 ರಲ್ಲಿ ಜನಿಸಿದ್ದ ಅಭಿಮಾನಿಗಳ ದಾದ ವಿಷ್ಣುವರ್ಧನ್ ರದ್ದು ಇಂದು 71 ನೇ ಜನ್ಮದಿನ. 2009 ರಲ್ಲಿ ಅವರು ದಿವಂಗತರಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಕುರಿತು ಶಿಲ್ಪಾ ಹೇಳಿದ್ದೇನು?