Publish Date: Thu, 16 Sep 2021 (11:30 IST)
Updated Date: Thu, 16 Sep 2021 (10:31 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳು ಎಂದರೆ ಪ್ರೇಕ್ಷಕ ತಲೆಗೆ ಹುಳ ಬಿಟ್ಟುಕೊಳ್ಳೋದು ಗ್ಯಾರಂಟಿ. ಈಗ ಉಪೇಂದ್ರ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಇದನ್ನು ನೋಡಿ ಪ್ರೇಕ್ಷಕರಿಗೆ ಹಲವು ಅನುಮಾನಗಳು ಶುರುವಾಗಿದೆ.
ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಟೈಟಲೇ ಇಲ್ಲ ಎನ್ನುವುದು ವಿಶೇಷ! ಬದಲಾಗಿ ತಿರುಪತಿ ತಿಮ್ಮಪ್ಪನ ಹಣೆಯಲ್ಲಿರುವ ಮೂರು ನಾಮದ ಚಿಹ್ನೆ ಮಾತ್ರವಿದೆ.
ಈ ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆಯನ್ನೂ ಉಪೇಂದ್ರ ಅವರೇ ಮಾಡಿದ್ದಾರಂತೆ. ಇದು ಕನ್ನಡ ಮಾತ್ರವಲ್ಲದೆ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ ಎಂದು ಸುಳಿವು ನೀಡಿದ್ದಾರೆ.