Publish Date: Wed, 15 Sep 2021 (10:29 IST)
Updated Date: Wed, 15 Sep 2021 (10:32 IST)
ವಿಜಯಪುರ: ಸೋದರಳಿಯನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಕ್ಕೊಳಗಾಗಿರುವ ನಟ ರಾಜು ತಾಳಿಕೋಟೆ ಈಗ ತಾವೂ ಪ್ರತಿದೂರು ಸಲ್ಲಿಸಿದ್ದಾರೆ.
ಸೋದರಳಿಯನ ಕೌಟುಂಬಿಕ ಕಲಹದ ವಿಚಾರವಾಗಿ ಮಧ್ಯಪ್ರವೇಶಿಸಿದ್ದ ರಾಜು ತಾಳಿಕೋಟೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ತಾಯಿ ನಟ ಮತ್ತು ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ರಾಜು ತಾಳಿಕೋಟೆ ಕೂಡಾ ಸೋದರಳಿಯನ ಪತ್ನಿ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ಸೋದರಳಿಯನ ಪತ್ನಿಗೆ ಅಕ್ರಮ ಸಂಬಂಧವಿತ್ತು. ಆತ ನನ್ನ ಮೇಲೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಲ್ಲದೆ, ಹಲ್ಲೆ ನಡೆಸಿದ್ದಾನೆ. ಈಗ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ರಾಜು ತಾಳಿ ಕೋಟೆ ಪ್ರತಿದೂರು ಸಲ್ಲಿಸಿದ್ದಾರೆ.