Publish Date: Tue, 14 Sep 2021 (17:10 IST)
Updated Date: Tue, 14 Sep 2021 (17:12 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯಗೆ ಇಂದು ಜನ್ಮದಿನದ ಸಂಭ್ರಮ. ಅವರ ಜನ್ಮದಿನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷವಾಗಿ ವಿಶ್ ಮಾಡಿದ್ದಾರೆ.
ಸಾಮಾನ್ಯವಾಗಿ ದರ್ಶನ್ ನಾಯಕಿ ನಟಿಯರಿಗೆ ವಿಶ್ ಮಾಡುವುದು ಅಪರೂಪ. ಆದರೆ ಅಮೂಲ್ಯ ಕುಟುಂಬಸ್ಥರ ಜೊತೆಗೆ ದರ್ಶನ್ ಗೆ ಆತ್ಮೀಯ ಸಂಬಂಧವಿದೆ. ಅಮೂಲ್ಯ ಡಿ ಬಾಸ್ ರನ್ನು ಅಂಕಲ್ ಎಂದು ಕರೆಯುತ್ತಾರೆ ಎಂದು ಸ್ವತಃ ದರ್ಶನ್ ಹಿಂದೊಮ್ಮೆ ಸಂದರ್ಶನದಲ್ಲಿ ಕಾಲೆಳೆದಿದ್ದರು.
ಇದೀಗ ಅಮೂಲ್ಯ ಜೊತೆಗಿನ ಫೋಟೋ ಹಂಚಿಕೊಂಡಿರುವ ದರ್ಶನ್ ಹುಟ್ಟುಹಬ್ಬದ ಶುಭಾಶಯಗಳು. ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. ನಿಮ್ಮ ಎಲ್ಲಾ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿ, ಯಾವಾಗಲೂ ನಗು ನಗುತ್ತಾ ಸಂತೋಷವಾಗಿರಿ ಎಂದು ಹಾರೈಸಿದ್ದಾರೆ.