Publish Date: Tue, 14 Sep 2021 (08:45 IST)
Updated Date: Tue, 14 Sep 2021 (09:01 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ಈಗಾಗಲೇ ಸ್ಟಾರ್ ನಟರ ಬಳಗವೇ ಇರುವುದು ಗೊತ್ತಾಗಿದೆ. ಈಗ ಅವರ ಜೊತೆಗೆ ಮತ್ತೊಬ್ಬ ನಟನ ಸೇರ್ಪಡೆಯಾಗಿದೆ.
ಖ್ಯಾತ ನಟ ರಘು ಮುಖರ್ಜಿ ಕೂಡಾ ಹೆಡ್ ಬುಷ್ ಸಿನಿಮಾಗೆ ಸೇರ್ಪಡೆಯಾಗಿದ್ದಾರೆ. ಈಗಾಗಲೇ ವಸಿಷ್ಠ ಸಿಂಹ, ಶ್ರುತಿ ಹರಿಹರನ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಸುದ್ದಿ ಬಂದಿತ್ತು. ಇದೀಗ ಮತ್ತೊಬ್ಬ ನಟನ ಸೇರ್ಪಡೆಯಾಗಿದೆ.
ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ನಿರ್ಮಿಸಿ ನಟಿಸುತ್ತಿರುವ ಸಿನಿಮಾ ಇದಾಗಿದ್ದು, ಭೂಗತ ದೊರೆ ಜಯರಾಜ್ ಕುರಿತಾದ ಕತೆಯಿರಲಿದೆ. ಅಗ್ನಿ ಶ್ರೀಧರ್ ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.