ಬೆಂಗಳೂರು: ನಾಗೇಂದ್ರ ಪ್ರಸಾದ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ವೀಕ್ಷಕರಿಗೆ ಅಚ್ಚರಿಯೊಂದನ್ನು ಚಿತ್ರತಂಡ ನೀಡುತ್ತಿದೆ.
ಈ ಸಿನಿಮಾದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಗಳಾದ ಪ್ರಭುದೇವ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹಾಡಿಗೆ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಈ ಹಾಡಿನ ಚಿತ್ರೀಕರಣ ಈಗ ವಿಶೇಷ ಸೆಟ್ ನಲ್ಲಿ ನಡೆದಿದೆ.
ಪವರ್ ಸ್ಟಾರ್ ಪುನೀತ್, ಪ್ರಭುದೇವ ಸೆಟ್ ನಲ್ಲಿ ಚಿತ್ರತಂಡದೊಂದಿಗಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಹೇಳಿ ಕೇಳಿ ಇಬ್ಬರೂ ನೃತ್ಯದ ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಮೀರಿಸಿದ ಪರ್ಫಾರ್ಮರ್ ಗಳು. ಇಬ್ಬರೂ ಜೊತೆಯಾಗಿದ್ದರೆ ಅದು ಹೇಗಿರಬಹುದು ಎಂಬ ಊಹೆಯೇ ಪ್ರೇಕ್ಷಕರಲ್ಲಿ ಪುಳಕವುಂಟು ಮಾಡಿದೆ.