ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮೊದಲು ಸ್ನೇಹಿತರಾಗಿ ಬಳಿಕ ವಿರೋಧಿಗಳಾದ ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರಗಿ ನಡುವಿನ ಕದನ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಡ್ರಗ್ ಕೇಸ್ ನಲ್ಲಿ ಸೆಲೆಬ್ರಿಟಿಗಳ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಪ್ರಶಾಂತ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಚಕ್ರವರ್ತಿ ಚಂದ್ರಚೂಡ್ ದೂರು ನೀಡಿದ್ದಾರೆ.
ಆಧಾರರಹಿತವಾಗಿ ಸೆಲೆಬ್ರಿಟಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ, ಪ್ರಶಾಂತ್ ಸಂಬರಗಿ ಬ್ಲ್ಯಾಕ್ ಮೇಲ್ ಮಾಡುತ್ತಾ ಬಂದಿದ್ದಾರೆ ಎಂದು ಚಕ್ರವರ್ತಿ ಚಂದ್ರಚೂಡ್ ದೂರಿನಲ್ಲಿ ಹೇಳಿದ್ದಾರೆ. ಈ ಮೊದಲೂ ಚಕ್ರವರ್ತಿ ಪ್ರಶಾಂತ್ ವಿರುದ್ಧ ಬಹಿರಂಗವಾಗಿ ಅನೇಕ ಆರೋಪ ಮಾಡಿದ್ದಾರೆ. ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.