Publish Date: Fri, 17 Sep 2021 (09:21 IST)
Updated Date: Fri, 17 Sep 2021 (09:23 IST)
ಬೆಂಗಳೂರು: ಡ್ಯಾನ್ಸ್ ಸ್ಟಾರ್, ದಕ್ಷಿಣ ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತರಾಗಿರುವ ಪ್ರಭುದೇವ ಜೊತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಸಿನಿಮಾದ ಹಾಡೊಂದರಲ್ಲಿ ಇಬ್ಬರೂ ಡ್ಯಾನ್ಸ್ ಸ್ಟಾರ್ ಗಳು ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಇದರ ಬಗ್ಗೆ ಪುನೀತ್ ಅನುಭವ ಹಂಚಿಕೊಂಡಿದ್ದಾರೆ.
ಪ್ರಭುದೇವ ಜೊತೆಗಿನ ನೃತ್ಯದ ಬಗ್ಗೆ ಟ್ವೀಟ್ ಮಾಡಿರುವ ಪುನೀತ್ ಇದೊಂದು ಮರೆಯಲಾಗದ ಅನುಭವ ಎಂದಿದ್ದಾರೆ. ಇನ್ನು ಇಬ್ಬರು ಡ್ಯಾನ್ಸ್ ಕಿಂಗ್ ಗಳು ತಮ್ಮ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿರುವುದಕ್ಕೆ ನಿರ್ದೇಶಕ ನಾಗೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದು, ಇದನ್ನು ಯಾವತ್ತಿಗೂ ಮರೆಯಲಾಗದು ಎಂದಿದ್ದಾರೆ.