Select Your Language

Notifications

webdunia
webdunia
webdunia
webdunia

ಲೈಂಗಿಕ ಸಂಬಂಧಕ್ಕೆ ಕರೆದರೆ ಪತಿಯಿಂದ ಥಳಿತ: ಪತ್ನಿಯ ಆರೋಪ

ಲೈಂಗಿಕ ಸಂಬಂಧಕ್ಕೆ ಕರೆದರೆ ಪತಿಯಿಂದ ಥಳಿತ: ಪತ್ನಿಯ ಆರೋಪ
ಅಹಮ್ಮದಾಬಾದ್ , ಶುಕ್ರವಾರ, 17 ಸೆಪ್ಟಂಬರ್ 2021 (09:40 IST)
ಅಹಮ್ಮದಾಬಾದ್: ಲೈಂಗಿಕ ಸಂಬಂಧಕ್ಕೆ ಕರೆದರೆ ಪತಿ ವಿಚಿತ್ರವಾಗಿ ವರ್ತಿಸುತ್ತಿರುವುದಲ್ಲದೆ, ಹಲ್ಲೆ ನಡೆಸುತ್ತಾರೆಂದು ಪತ್ನಿಯೊಬ್ಬಳು ಪೊಲೀಸರಿಗೆ ದೂರು ನೀಡಿದ ಘಟನೆ ಅಹಮ್ಮದಾಬಾದ್ ನಲ್ಲಿ ನಡೆದಿದೆ.


ಕಳೆದ ಫೆಬ್ರವರಿಯಲ್ಲಿ ಇಬ್ಬರ ವಿವಾಹವಾಗಿತ್ತು. ವಿವಾಹವಾದ 10 ದಿನದ ಬಳಿಕ ಮೊದಲ ಬಾರಿಗೆ ಪತಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆದರೆ ಅದಾದ ಬಳಿಕ ವಿಚಿತ್ರವಾಗಿ ನಡೆದುಕೊಂಡಿದ್ದ. ಸೆಕ್ಸ್ ಗೆ ಕರೆದರೆ ಹಲ್ಲೆ ನಡೆಸುತ್ತಿದ್ದ. ಪತಿಯ ಮನೆಯವರೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು.

ಈ ಬಗ್ಗೆ ಕೇಳಿದಾಗ ನಿನ್ನ ದೇಹ ಸೌಂದರ್ಯ ಇಷ್ಟವಾಗಲಿಲ್ಲ. ನನಗೆ ಬೇರೊಬ್ಬ ಮಹಿಳೆಯ ಮೇಲೆ ಮನಸ್ಸಾಗಿದೆ ಎಂದು ಪತಿ ಹೇಳುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

` Whats App' ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್