Publish Date: Wed, 22 Sep 2021 (10:31 IST)
Updated Date: Wed, 22 Sep 2021 (10:53 IST)
ಬೆಂಗಳೂರು: ತೆಲುಗಿನ ಗೀತಾ ಗೋವಿಂದಂ ಸಿನಿಮಾ ಶೈಲಿಯಲ್ಲಿ ಬಸ್ ನಲ್ಲಿ ಯುವತಿಗೆ ಚುಂಬಿಸಿದ ಯುವಕನನ್ನು ಪೊಲೀಸರು ಈಗ ಬಂಧಿಸಿದ್ದಾರೆ.
ಚಲಿಸುತ್ತಿದ್ದ ಬಸ್ ನಲ್ಲಿ ಸಿನಿಮಾ ಶೈಲಿಯಲ್ಲಿ ಯುವತಿಯ ಕೆನ್ನೆಗೆ ಕಿಸ್ ಮಾಡಿದ್ದ ಯುವಕ ಬಳ್ಳಾರಿ ಮೂಲದ ಮಧುಸೂದನ್ ರೆಡ್ಡಿ (25) ಎಂದು ತಿಳಿದುಬಂದಿದೆ. ಸೆ.12 ರಂದು ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬರುತ್ತಿದ್ದಾಗ ಮಲಗಿದ್ದ ಯುವತಿಗೆ ಕಿಸ್ ಮಾಡಿದ್ದ.
ಚುಂಬಿಸಿದವರು ಯಾರು ಎಂದು ಯುವತಿ ನೋಡುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ. ಇದೀಗ ಪೊಲೀಸರು ಬಸ್ ನಲ್ಲಿ ಪ್ರಯಾಣಿಸಿದ್ದವರ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.