Select Your Language

Notifications

webdunia
webdunia
webdunia
webdunia

ಪತ್ನಿ ನೇಣು ಹಾಕುತ್ತಿರುವ ವಿಡಿಯೋ ಮಾಡಿ ಸಂಬಂಧಿಕರಿಗೆ ಕಳುಹಿಸಿದ ಪತಿ!

ಪತ್ನಿ ನೇಣು ಹಾಕುತ್ತಿರುವ ವಿಡಿಯೋ ಮಾಡಿ ಸಂಬಂಧಿಕರಿಗೆ ಕಳುಹಿಸಿದ ಪತಿ!
ಚೆನ್ನೈ , ಗುರುವಾರ, 23 ಸೆಪ್ಟಂಬರ್ 2021 (10:40 IST)
ಚೆನ್ನೈ: ಪತ್ನಿ ಆತ್ಮಹತ್ಯೆ ಮಾಡುವ ವಿಡಿಯೋ ಮಾಡಿದ ಪತಿ ಮಹಾಶಯ ಆ ವಿಡಿಯೋವನ್ನು ಆಕೆಯ ಸಂಬಂಧಿಕರಿಗೆ ಕಳುಹಿಸಿದ ಹೇಯ ಕೃತ್ಯ ತಮಿಳುನಾಡಿನ ನೆಲ್ಲೋರ್ ನಲ್ಲಿ ನಡೆದಿದೆ.


ಈ ಸಂಬಂಧ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಅನುಮಾನಿಸುತ್ತಿದ್ದ ಪತಿ ಸದಾ ಆಕೆಯೊಡನೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಗಂಡ ಮತ್ತು ಇಬ್ಬರು ಮಕ್ಕಳ ಎದುರೇ ನೇಣು ಹಾಕಿಕೊಂಡಿದ್ದಾಳೆ.

ಇದನ್ನು ನೋಡುತ್ತಿದ್ದ ಪತಿ ಆಕೆಯನ್ನು ತಡೆಯುವ ಬದಲು ಆ ದೃಶ್ಯಗಳನ್ನು ವಿಡಿಯೋ ಮಾಡಿ ಆಕೆಯ ಪೋಷಕರು, ಸಂಬಂಧಿಕರಿಗೆ ರವಾನಿಸಿದ್ದಾನೆ. ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿ ಮುಗಿಸಿ ಬರುತ್ತಿದ್ದ ಮಹಿಳೆ ಮೇಲೆ ಉಬರ್ ಚಾಲಕನಿಂದ ಮಾನಭಂಗ