Select Your Language

Notifications

webdunia
webdunia
webdunia
webdunia

ಪಾರ್ಟಿ ಮುಗಿಸಿ ಬರುತ್ತಿದ್ದ ಮಹಿಳೆ ಮೇಲೆ ಉಬರ್ ಚಾಲಕನಿಂದ ಮಾನಭಂಗ

ಅಪರಾಧ ಸುದ್ದಿಗಳು
ಬೆಂಗಳೂರು , ಗುರುವಾರ, 23 ಸೆಪ್ಟಂಬರ್ 2021 (10:00 IST)
ಬೆಂಗಳೂರು: ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದ ಮಹಿಳೆಯ ಮೇಲೆ ಉಬರ್ ಚಾಲಕ ಮಾನಭಂಗ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಜಾರ್ಖಂಡ್ ಮೂಲದ ಮಹಿಳೆ ಸಂತ್ರಸ್ತೆ. ಜೀವನ್ ಭೀಮಾ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತರ ಮನೆಯಲ್ಲಿ ಪಾರ್ಟಿ ಮುಗಿಸಿ ಉಬರ್ ಕ್ಯಾಬ್ ನಲ್ಲಿ ಮಹಿಳೆ ಮನೆಗೆ ಹೊರಟಿದ್ದಳು. ಇನ್ನೇನು ಮನೆ ತಲುಪಿತು ಎನ್ನುವಾಗ ಕಾರಿನ ಡೋರ್ ಲಾಕ್ ಮಾಡಿಕೊಂಡ ಆರೋಪಿ ಚಾಲಕ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.  ಕೃತ್ಯವೆಸಗಿದ ಬಳಿಕ ಮಹಿಳೆಯನ್ನು ಕಾರಿನಿಂದ ಹೊರ ಹಾಕಿದ್ದಾನೆ. ಆದರೆ ಈ ಗಲಾಟೆಯ ನಡುವೆ ಮಹಿಳೆ ಆರೋಪಿಯ ಮೊಬೈಲ್ ಕಸಿದುಕೊಂಡಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತಕುಮಾರ್ ಅವರ ಸೇವಾಗುಣ ಎಲ್ಲರಿಗೂ ಪ್ರೇರಣೆ: ಬಸವರಾಜ ಬೊಮ್ಮಾಯಿ