Select Your Language

Notifications

webdunia
webdunia
webdunia
webdunia

ಹೇಳಿದಷ್ಟು ವರನ ತೋರಿಸಲಿಲ್ಲವೆಂದು ಮಧ್ಯವರ್ತಿಗೆ ದಂಡ ವಿಧಿಸಿದ ಕೋರ್ಟ್!

ಅಪರಾಧ ಸುದ್ದಿಗಳು
ಮುಂಬೈ , ಬುಧವಾರ, 29 ಸೆಪ್ಟಂಬರ್ 2021 (11:29 IST)
ಮುಂಬೈ: ಮದುವೆ ಮಾಡಿಸಲು ಹೋಗಿ ಇಲ್ಲೊಬ್ಬಳು ಮಧ್ಯವರ್ತಿ ತಕ್ಕ ದಂಡ ತೆರುವ ಪರಿಸ್ಥಿತಿ ಮುಂಬೈನಲ್ಲಿ ನಡೆದಿದೆ.


ಪ್ರಿಯಾ ಎನ್ನುವ ಬ್ರೋಕರ್ ಮಹಿಳೆಯೊಬ್ಬರಿಗೆ ತಿಂಗಳಿಗೆ 15 ವರಗಳ ಪ್ರೊಫೈಲ್ ತೋರಿಸುವುದಾಗಿ ಭರವಸೆ ನೀಡಿ ಫೀಸ್ ವಸೂಲಿ ಮಾಡಿದ್ದರು. ಆದರೆ ಅವರು ಹೇಳಿದಷ್ಟು ವರನ ಪ್ರೊಫೈಲ್ ತೋರಿಸಲು ವಿಫಲವಾಗಿದ್ದಕ್ಕೆ ಮಹಿಳೆ ಗ್ರಾಹಕ ನ್ಯಾಯಾಲಯಕ್ಕೆ ಮೊರೆಯಿಟ್ಟಿದ್ದಳು.

ಮಹಿಳೆಯ ದೂರು ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ಬ್ರೋಕರ್ ಪ್ರಿಯಾಗೆ 5,000 ರೂ. ವೆಚ್ಚ ಸೇರಿದಂತೆ 55,000 ರೂ. ದಂಡ ಮಹಿಳೆಗೆ ನೀಡುವಂತೆ ತೀರ್ಪು ನೀಡಿದೆ. 2012 ರಲ್ಲಿ ಬ್ರೋಕರ್ ಗೆ ಮಹಿಳೆ ವರನನ್ನು ಹುಡುಕಿಕೊಡಲು 55,000 ರೂ. ಚೆಕ್ ಮೂಲಕ ನೀಡಿದ್ದಳಂತೆ. ಹೇಳಿದ ಹಾಗೆ ವರನನ್ನು ಹುಡುಕಿಕೊಡದ ತಪ್ಪಿಗೆ ಬ್ರೋಕರ್ ದಂಡ ತೆರುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಕೋವಿಡ್ ನಿಂದ ಬಲಿಯಾದ ಕುಟುಂಬಗಳಿಗೆ 1 ಲಕ್ಷ ಪರಿಹಾರ' ಆದೇಶ ವಾಪಸ್ ಪಡೆದ ಸರ್ಕಾರ