Publish Date: Wed, 29 Sep 2021 (09:25 IST)
Updated Date: Wed, 29 Sep 2021 (09:31 IST)
ಚೆನ್ನೈ: ಎಂಟನೇ ತಿಂಗಳಲ್ಲಿ ಗರ್ಭಪಾತವಾಗಲು ಗುಳಿಗೆ ಸೇವಿಸಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಒಡಿಶಾ ಮೂಲದ 23 ವರ್ಷದ ಮಹಿಳೆ ಸಾವನ್ನಪ್ಪಿದವರು. ಬಾತ್ ರೂಂನಲ್ಲಿದ್ದ ಜಾರಿ ಬಿದ್ದಿದ್ದ ಮಹಿಳೆ ಕೆಲವು ದಿನಗಳ ಮೊದಲು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಳು.
ಆದರೆ ಮತ್ತೆ ಹೊಟ್ಟೆ ನೋವೆಂದು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಳು. ಈ ವೇಳೆ ಹೊಟ್ಟೆ ನೋವಿಗೆ ಕಾರಣ ಪತ್ತೆ ಮಾಡಿದ ವೈದ್ಯರಿಗೆ ಆಕೆಯ ಭ್ರೂಣಕ್ಕೆ ಸೋಂಕು ತಗುಲಿರುವುದು ತಿಳಿದುಬಂದಿದೆ. ಹೀಗಾಗಿ ಗರ್ಭಕೋಶವನ್ನೇ ತೆಗೆಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದಕ್ಕೆ ಆಕೆ ಗರ್ಭಪಾತ ಮಾಡಿಸಿಕೊಳ್ಳಲು ತೆಗೆದುಕೊಂಡ ಔಷಧವೇ ಕಾರಣವೆಂದು ತಿಳಿದು ಬಂತು. ಆದರೆ ಮಹಿಳೆ ಈಗ ಸಾವನ್ನಪ್ಪಿದ್ದು, ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.