Publish Date: Thu, 07 Oct 2021 (09:55 IST)
Updated Date: Thu, 07 Oct 2021 (09:56 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಬಂಧಿತರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್ ಸಿಬಿ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ಈ ಹಿನ್ನಲೆಯಲ್ಲಿ ಇಂದು ಮತ್ತೆ ನ್ಯಾಯಾಲಯದ ಮುಂದೆ ಆರ್ಯನ್ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಲಿದ್ದಾರೆ.
ಅಕ್ಟೋಬರ್ 4 ರಂದು ನ್ಯಾಯಾಲಯದ ಮುಂದೆ ಎನ್ ಸಿಬಿ ಆರ್ಯನ್ ವ್ಯಾಟ್ಸಪ್ ಚ್ಯಾಟ್ ಗಳಲ್ಲಿ ಡ್ರಗ್ ವ್ಯವಹಾರಕ್ಕೆ ಸಂಬಂಧಿಸಿದ ಸುಳಿವು ಸಿಕ್ಕಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೊಪ್ಪಿಸಲು ಮನವಿ ಮಾಡಿತ್ತು. ಅದನ್ನು ಪುರಸ್ಕರಿಸಿದ ನ್ಯಾಯಾಲಯ ಇಂದಿನವರೆಗೆ ಎನ್ ಸಿಬಿ ಕಸ್ಟಡಿಗೆ ನೀಡಿತ್ತು.
ಆರ್ಯನ್ ನನ್ನು ಪಾರ್ಟಿಗೆ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆತನ ಬಳಿ ಯಾವುದೇ ಡ್ರಗ್ ಸಿಕ್ಕಿರಲಿಲ್ಲ ಎನ್ನುವುದು ಆರ್ಯನ್ ಪರ ವಕೀಲರ ವಾದವಾಗಿದೆ. ಇಂದು ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಕೆಯಾಗಲಿದ್ದು, ಆರ್ಯನ್ ಭವಿಷ್ಯ ತೀರ್ಮಾನವಾಗಲಿದೆ.
Krishnaveni K
Publish Date: Thu, 07 Oct 2021 (09:55 IST)
Updated Date: Thu, 07 Oct 2021 (09:56 IST)