Select Your Language

Notifications

webdunia
webdunia
webdunia
webdunia

ಆರ್ಯನ್ ಖಾನ್ ಪರ ನಟಿ ರಮ್ಯಾ ಬ್ಯಾಟಿಂಗ್

ಆರ್ಯನ್ ಖಾನ್ ಪರ ನಟಿ ರಮ್ಯಾ ಬ್ಯಾಟಿಂಗ್
ಬೆಂಗಳೂರು , ಬುಧವಾರ, 6 ಅಕ್ಟೋಬರ್ 2021 (17:55 IST)
ಬೆಂಗಳೂರು: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪರವಾಗಿ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಮಾತನಾಡಿದ್ದಾರೆ.


ಎನ್ ಸಿಬಿ ಅಧಿಕಾರಿಗಳು ಆರ್ಯನ್ ಸ್ನೇಹಿತರ ಬಳಿ ಎಷ್ಟೆಲ್ಲಾ ಮಾದಕ ವಸ್ತುಗಳು ಸಿಕ್ಕಿವೆ ಎಂದು ಪಟ್ಟಿ ನೀಡಿದ್ದರು. ಆದರೆ ಆರ್ಯನ್ ಬಳಿ ಸಿಕ್ಕಿಲ್ಲ ಎಂದಿದ್ದರು.

ಇದೇ ಹೇಳಿಕೆಯನ್ನು ಉಲ್ಲೇಖಿಸಿ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಎನ್ ಸಿಬಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ‘ಆರ್ಯನ್ ಬಳಿ ಏನೂ ಡ್ರಗ್ ಸಿಕ್ಕಿಲ್ಲ ಎಂದು ಎನ್ ಸಿಬಿಯೇ ಹೇಳಿದೆ. ಹಾಗಿದ್ದ ಮೇಲೆ ಅವರನ್ನು ಯಾಕೆ ಬಂಧಿಸಲಾಗಿದೆ? ಅಲ್ಲೊಬ್ಬ ಬಿಜೆಪಿ ಸಚಿವರ ಮಗ ರೈತರ ಮೇಲೆ ವಾಹನ ಹರಿಸಿ ನಾಲ್ವರನ್ನು ಕೊಂದಿದ್ದಾನೆ. ಆತನನ್ನು ಇದುವರೆಗೆ ಬಂಧಿಸಿಲ್ಲ.

ಎನ್ ಸಿಬಿ ಈ ಪಾರ್ಟಿ ಆಯೋಜಕರು ಯಾರು ಎಂದು ಗೊತ್ತು. ಹಾಗಿರುವಾಗ ಅವರನ್ನು ಬಂಧಿಸಿ ಪ್ರಶ್ನಿಸಬಹುದಲ್ಲವೇ? ವ್ಯಾಟ್ಸಪ್ ಚ್ಯಾಟ್ ಗಳನ್ನು ಕೋರ್ಟ್ ನಲ್ಲಿ ಸಾಕ್ಷ್ಯವೆಂದು ಪರಿಗಣಿಸಲಾಗದು. ಎನ್ ಸಿಬಿ ತನಿಖೆಯಲ್ಲಿ ನೀಡಿದ ಹೇಳಿಕೆಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ತನಿಖೆ ವೇಳೆ ನೀಡಿದ ಹೇಳಿಕೆಗಳೆಲ್ಲವೂ ಸತ್ಯವಲ್ಲ. ಒಂದು ವೇಳೆ ಇದು ನಿಜವಾದರೆ ಎನ್ ಸಿಬಿ ನಿಯಮ ಉಲ್ಲಂಘಿಸುತ್ತಿದೆ. ಈ ಉನ್ನತಾಧಿಕಾರಿಗಳೆಲ್ಲಾ ಮಾಡುತ್ತಿರುವುದು ಸರಿಯಲ್ಲ? ಇವರೆಲ್ಲಾ ದೀಪಿಕಾ ಕುಸಿದುಬಿದ್ದರು, ಆರ್ಯನ್ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಎಂಬಿತ್ಯಾದಿ ಗಾಸಿಪ್ ಗಳಿಗೆ ನೀರೆಯುತ್ತಿದ್ದಾರಷ್ಟೇ. ಇದಕ್ಕೆಲ್ಲಾ ಉತ್ತರ ಸಿಗಬೇಕಿದೆ’ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ತಲಾ’ ಅಜಿತ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ