Select Your Language

Notifications

webdunia
webdunia
webdunia
Thursday, 17 April 2025
webdunia

ಆರ್ಯನ್ ಬಿಡುಗಡೆಯಾಗುವವರೆಗೂ ಮನ್ನತ್ ನಲ್ಲಿ ನೋ ಸ್ವೀಟ್: ಗೌರಿ ಖಾನ್ ಆರ್ಡರ್!

ಆರ್ಯನ್ ಖಾನ್
ಮುಂಬೈ , ಮಂಗಳವಾರ, 19 ಅಕ್ಟೋಬರ್ 2021 (09:20 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಜೈಲು ಪಾಲಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮನೆಗೆ ಬರುವವರೆಗೂ ಮನೆಯಲ್ಲಿ ಸಿಹಿ ತಿನಿಸು ಮಾಡದಂತೆ ಅಮ್ಮ ಗೌರಿ ಖಾನ್ ಆರ್ಡರ್ ಆಗಿದೆ!


ಶಾರುಖ್ ನಿವಾಸ ಮನ್ನತ್ ನಲ್ಲಿ ಅಡುಗೆಯವರು ಒಂದು ದಿನ ಸಿಹಿ ತಿನಿಸು ಮಾಡಲು ಸಿದ್ಧತೆ ನಡೆಸಿದ್ದಾಗ ಗಮನಿಸಿದ ಗೌರಿ ಖಾನ್ ಆರ್ಯನ್ ಬರುವವರೆಗೂ ಯಾವುದೇ ಸಿಹಿ ಅಡುಗೆ ಮಾಡಬೇಡಿ ಎಂದು ಆದೇಶಿಸಿದ್ದಾರಂತೆ.

ಮೊನ್ನೆಯಷ್ಟೇ ನವರಾತ್ರಿ ಸಂದರ್ಭದಲ್ಲಿ ಪುತ್ರನ ಬರುವಿಕೆಗಾಗಿ ಗೌರಿ ಖಾನ್ ವ್ರತ, ಉಪವಾಸ ಮಾಡಿ ದೇವರ ಪ್ರಾರ್ಥನೆ ಮಾಡಿದ್ದಾರೆ. ಪ್ರತೀ ಬಾರಿ ದೀಪಾವಳಿ, ಈದ್ ಹಬ್ಬಗಳ ಸಂದರ್ಭದಲ್ಲಿ ಇಡೀ ಮನ್ನತ್ ದೀಪಾಲಂಕಾರದಿಂದ ಜಗಮಗಿಸುತ್ತದೆ. ಆದರೆ ಈ ಬಾರಿ ಮನೆಯಲ್ಲಿ ಯಾರಿಗೂ ಹಬ್ಬ ಆಚರಿಸುವ ಮೂಡ್ ಇಲ್ಲ ಎನ್ನಲಾಗಿದೆ. ಈ ದೀಪಾವಳಿ ವೇಳೆಗೆ ಆರ್ಯನ್ ನ್ಯಾಯಾಂಗ ಬಂಧನ ಅವಧಿ ಕೊನೆಗೊಳ್ಳಲಿದ್ದು, ಬಳಿಕ ಜಾಮೀನು ಸಿಕ್ಕಿ ಆತ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಮನೆಯವರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಂತ ಬ್ಯಾನರ್ ನಲ್ಲಿ ನಟಿಸಲು ಸಿದ್ಧರಾದ ಪುನೀತ್ ರಾಜ್ ಕುಮಾರ್