ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮುದ್ದಿನ ಮಗಳು ವಮಿಕಾ ಕೊಹ್ಲಿ ಜೊತೆಗಿನ ಸುಂದರ ಕ್ಷಣದ ಫೋಟೋವೊಂದನ್ನು ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಮಿಕಾರ ಮುಖವನ್ನು ಕೊಹ್ಲಿ ದಂಪತಿ ಇದುವರೆಗೆ ಹೊರಜಗತ್ತಿಗೆ ತೋರಿಸಿಲ್ಲ. ಆದರೆ ಅಪರೂಪಕ್ಕೊಮ್ಮೆ ವಮಿಕಾಳ ಫೋಟೋವನ್ನು ಕೊಹ್ಲಿ ದಂಪತಿ ಪ್ರಕಟಿಸುತ್ತಲೇ ಇರುತ್ತಾರೆ.
ಈ ಬಾರಿಯೂ ವಮಿಕಾ ಜೊತೆ ಆಡುತ್ತಿರುವ ಫೋಟೋವೊಂದನ್ನು ಅನುಷ್ಕಾ ಹಂಚಿಕೊಂಡಿದ್ದು, ನನ್ನ ಹೃದಯ ಒಂದೇ ಫ್ರೇಮ್ ನೊಳಗಿದೆ ಎಂದಿದ್ದಾರೆ. ಟಿ20 ವಿಶ್ವಕಪ್ ಗೆ ತಯಾರಾಗುತ್ತಿರುವ ಕೊಹ್ಲಿ ಮಗಳ ಜೊತೆಗೆ ರಿಲ್ಯಾಕ್ಸ್ ಮೂಡ್ ನಲ್ಲಿರುವ ಫೋಟೋ ನೋಡಿ ಅಭಿಮಾನಿಗಳೂ ಇಷ್ಟಪಟ್ಟಿದ್ದಾರೆ.