Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಬಳಿಕ ಆರ್ ಸಿಬಿ ಸಾರಥಿ ಇವರಾಗಬಹುದೇ?!

webdunia
ಗುರುವಾರ, 14 ಅಕ್ಟೋಬರ್ 2021 (11:56 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ನಾಯಕರಾಗಿ ಕೊಹ್ಲಿ ಯುಗಾಂತ್ಯವಾಗಿದೆ. ಅವರ ಬಳಿಕ ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ ಹಲವು ಆಟಗಾರರ ಹೆಸರು ಕೇಳಿಬರುತ್ತಿದೆ.


ಅದರಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಹೆಸರು ಕೆಎಲ್ ರಾಹುಲ್. ಸದ್ಯಕ್ಕೆ ಕಿಂಗ್ಸ್ ಪಂಜಾಬ್ ನಾಯಕರಾಗಿರವ ರಾಹುಲ್ ಮುಂದಿನ ಆವೃತ್ತಿ ವೇಳೆಗೆ ಮರಳಿ ಬೆಂಗಳೂರು ತಂಡ ಕೂಡಿಕೊಳ್ಳಬಹುದು ಎಂಬ ಸುದ್ದಿಗಳಿವೆ. ಅದಕ್ಕೆ ಪುರಾವೆಯೆಂಬಂತೆ ಈ ಐಪಿಎಲ್ ನಲ್ಲಿ ಪಂಜಾಬ್ ಪಂದ್ಯ ಮುಗಿದ ಬಳಿಕ ಅವರು ತಂಡಕ್ಕೆ ವಿದಾಯ ಸಂದೇಶ ಬರೆದಿರುವುದು.

ಹೇಗಿದ್ದರೂ ಮುಂದಿನ ಆವೃತ್ತಿ ವೇಳೆಗೆ ಮತ್ತೆ ಎಲ್ಲಾ ಫ್ರಾಂಚೈಸಿಗಳಲ್ಲಿ ತಂಡದ ಆಟಗಾರರ ಬದಲಾವಣೆಯಾಗಲಿದೆ. ಹಲವರು ಅನಿವಾರ್ಯವಾಗಿ ಹರಾಜಿಗೊಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡು ನಾಯಕನ ಪಟ್ಟ ನೀಡುವ ಯೋಜನೆ ಆರ್ ಸಿಬಿ ಪಾಳಯದಲ್ಲಿದೆ ಎನ್ನಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಕ್ಕ ಹೊಸ ಭರವಸೆ ಎಸ್.ಭರತ್