ದುಬೈ: ಐಪಿಎಲ್ 14 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಪ್ ಗೆಲ್ಲಲು ಸಾಧ್ಯವಾಗದೇ ಇರಬಹುದು. ಆದರೆ ಮತ್ತೊಬ್ಬ ಪ್ರತಿಭಾವಂತ ಬ್ಯಾಟ್ಸ್ ಮನ್ ತಂಡಕ್ಕೆ ಸಿಕ್ಕಿದ್ದಾನೆ. ಅವರೇ ಶ್ರೀಕರ್ ಭರತ್.
ಆಂಧ್ರಪ್ರದೇಶ ಮೂಲದ ಭರತ್ ಇದುವರೆಗೆ ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ್ದರು. ರಣಜಿ ಟ್ರೋಫಿಯಲ್ಲಿ ತ್ರಿಶತಕದ ಸಾಧನೆ ಮಾಡಿದ್ದರು. ಈ ಬಾರಿ ಐಪಿಎಲ್ ನಲ್ಲಿ ಆರ್ ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕಕ್ಕೆ ಭರವಸೆಯ ಬ್ಯಾಟ್ಸ್ ಮನ್ ಆಗಿ ಮಿಂಚಿದ್ದಾರೆ.
28 ವರ್ಷದ ಯುವ ಆಟಗಾರ ಒಟ್ಟು ಆಡಿದ್ದು 8 ಐಪಿಎಲ್ ಪಂದ್ಯಗಳನ್ನು. 8 ಪಂದ್ಯಗಳಿಂದ ಈ ಬಲಗೈ ಬ್ಯಾಟ್ಸ್ ಮನ್ 191 ರನ್ ಗಳಿಸಿದ್ದಾರೆ. ವಿಶೇಷವೆಂದರೆ ಅವರು ಆಡಿದ ಪಂದ್ಯಗಳಲ್ಲಿ ತಂಡಕ್ಕೆ ಆಪತ್ಬಾಂಧವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಆರ್ ಸಿಬಿ ತಂಡಕ್ಕೆ ದೊಡ್ಡ ಆಸ್ತಿಯಾಗುವ ಸೂಚನೆ ನೀಡಿದ್ದಾರೆ. ದೇವದತ್ತ್ ಪಡಿಕ್ಕಲ್ ಬಳಿಕ ಆರ್ ಸಿಬಿಗೆ ಸಿಕ್ಕ ಮತ್ತೊಬ್ಬ ಪ್ರತಿಭಾವಂತ ಬ್ಯಾಟ್ಸ್ ಮನ್ ಭರತ್. ಮುಂದಿನ ದಿನಗಳಲ್ಲಿ ತಂಡಕ್ಕೆ ಆಸ್ತಿಯಾಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.