Select Your Language

Notifications

webdunia
webdunia
webdunia
webdunia

ಐಪಿಎಲ್ 14 ರ ಎರಡನೇ ಫೈನಲಿಸ್ಟ್ ಇಂದು ನಿರ್ಧಾರ

ಐಪಿಎಲ್ 14 ರ ಎರಡನೇ ಫೈನಲಿಸ್ಟ್ ಇಂದು ನಿರ್ಧಾರ
ದುಬೈ , ಬುಧವಾರ, 13 ಅಕ್ಟೋಬರ್ 2021 (09:20 IST)
ದುಬೈ: ಐಪಿಎಲ್ 14 ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದು ಎರಡನೇ ಫೈನಲಿಸ್ಟ್ ತೀರ್ಮಾನವಾಗುವ ಎಲಿಮಿನೇಟರ್ ಪಂದ್ಯ ನಡೆಯಲಿದೆ.


ಈ ಪಂದ್ಯದಲ್ಲಿ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎರಡನೇ ಪ್ಲೇ ಆಫ್ ನಲ್ಲಿ ಗೆದ್ದಿದ್ದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಸೆಣಸಾಡಲಿದೆ.

ಸದ್ಯದ ಮಟ್ಟಿಗೆ ನೋಡುವುದಾದರೆ ಡೆಲ್ಲಿ ಕ್ಯಾಪಿಟಲ್ಸ್ ಪ್ರಬಲ ತಂಡವೆನಿಸುತ್ತದೆ. ಅತ್ತ ಕೋಲ್ಕೊತ್ತಾ ಬ್ಯಾಟಿಂಗ್ ಹೇಳಿಕೊಳ್ಳುವಷ್ಟು ಸದೃಢವಾಗಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಡೆಲ್ಲಿ ಫೇವರಿಟ್ ಎನಿಸಿಕೊಂಡಿದೆ. ಅಲ್ಲದೆ, ಡೆಲ್ಲಿ ಇದುವರೆಗೆ ಐಪಿಎಲ್ ಟೂರ್ನಮೆಂಟ್ ಗೆದ್ದಿಲ್ಲ. ಈ ಬಾರಿ ಅದಕ್ಕೆ ಉತ್ತಮ ಅವಕಾಶವಿದ್ದು, ಅದನ್ನು ಬಳಸಿಕೊಳ್ಳಲು ಸಂಪೂರ್ಣ ಪ್ರಯತ್ನ ನಡೆಸಲಿದೆ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಗೆದ್ದ ತಂಡ ಚೆನ್ನೈ ಜೊತೆಗೆ ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಹೊಸ ಸಮವಸ್ತ್ರ ಇಂದು ಲಾಂಚ್