ದುಬೈ: ಐಪಿಎಲ್ ಮುಗಿದ ತಕ್ಷಣವೇ ಯುಎಇನಲ್ಲಿ ಟಿ20 ವಿಶ್ವಕಪ್ ಮಹಾಜಾತ್ರೆ ಆರಂಭವಾಗಲಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗಿಯಾಗಲು ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ಸೇರಿದಂತೆ ಕೆಲವು ಕ್ರಿಕೆಟಿಗರು ತಂಡದ ಹೋಟೆಲ್ ಗೆ ಬಂದಿಳಿದಿದ್ದಾರೆ.
ಐಪಿಎಲ್ ನಿಂದ ಮುಂಬೈ ಇಂಡಿಯನ್ಸ್ ಹೊರಬಿದ್ದ ಬೆನ್ನಲ್ಲೇ ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸೇರಿದಂತೆ ವಿಶ್ವಕಪ್ ಆಡುವ ಎಲ್ಲಾ ಫ್ರಾಂಚೈಸಿಗಳ ಟೀಂ ಇಂಡಿಯಾ ಆಟಗಾರರು ತಂಡಕ್ಕಾಗಿ ಮೀಸಲಿರುವ ಹೋಟೆಲ್ ಕೊಠಡಿಗೆ ಬಂದು ಸೇರಿದ್ದಾರೆ.
ಅಕ್ಟೋಬರ್ 17 ರಿಂದ ವಿಶ್ವಕಪ್ ಟಿ20 ಪಂದ್ಯ ಆರಂಭವಾಗಲಿದೆ. ಭಾರತ ತಂಡ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವನ್ನು ಅಕ್ಟೋಬರ್ 24 ರಂದು ಆಡಲಿದೆ.