Publish Date: Wed, 06 Oct 2021 (11:50 IST)
Updated Date: Wed, 06 Oct 2021 (10:04 IST)
ದುಬೈ: ಟೀಂ ಇಂಡಿಯಾಗೆ ಆಯ್ಕೆಯಾಗುವ ಮೊದಲು ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಗಳಾದ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಜೋಡಿ ಐಪಿಎಲ್ ನಲ್ಲಿ ಮೋಡಿ ಮಾಡುತ್ತಿತ್ತು. ಇಬ್ಬರೂ ಫಾರ್ಮ್ ಕಳೆದುಕೊಂಡಿರುವ ಪರಿಣಾಮ ಮುಂಬೈ ತಂಡವೇ ಕಳೆಗುಂದಿದೆ.
ಇದರ ಬಗ್ಗೆ ಮಾತನಾಡಿರುವ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಟೀಂ ಇಂಡಿಯಾಗೆ ಆಯ್ಕೆಯಾದ ಮೇಲೆ ಇಬ್ಬರೂ ಗಾಂಭೀರ್ಯವಾಗಿಲ್ಲ, ಆರಾಮವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ ಸಿಕ್ಕ ಮೇಲೆ ಇಬ್ಬರೂ ಆರಾಮವಾಗಿದ್ದಾರೆ. ತಮ್ಮ ಹೊಡೆತಗಳ ಬಗ್ಗೆ ಗಮನವೇ ಇಲ್ಲ. ಬಹುಶಃ ಭಾರತ ತಂಡದ ಸದಸ್ಯರು ಎಂಬ ಕಾರಣಕ್ಕೆ ತಾವಿಬ್ಬರೂ ದೊಡ್ಡ ಆಟಗಾರರು ಎಂಬ ಭ್ರಮೆಯಲ್ಲಿ ದೊಡ್ಡ ಹೊಡೆತಗಳಿಗೆ ಕೈ ಹಾಕುತ್ತಿದ್ದಾರೆ ಎಂದು ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.