Select Your Language

Notifications

webdunia
webdunia
webdunia
Sunday, 13 April 2025
webdunia

ಪರ್ಪಲ್ ಕ್ಯಾಪ್ ಗಾಗಿ ಆವೇಶ್ ಖಾನ್-ಹರ್ಷಲ್ ಪಟೇಲ್ ನಡುವೆ ಪೈಪೋಟಿ

ಹರ್ಷಲ್ ಪಟೇಲ್
ಬೆಂಗಳೂರು , ಬುಧವಾರ, 6 ಅಕ್ಟೋಬರ್ 2021 (09:27 IST)
ದುಬೈ: ಐಪಿಎಲ್ 14 ರಲ್ಲಿ ಬೌಲರ್ ಗಳ ಪೈಕಿ ಈ ಬಾರಿ ಅನುಭವಿಗಳಿಗಿಂತಲೂ ಯುವ ಬೌಲರ್ ಗಳೇ ಇಂಪ್ರೆಸ್ ಮಾಡಿದ್ದಾರೆ. ಪರಿಣಾಮ ಗರಿಷ್ಠ ವಿಕೆಟ್ ಟೇಕರ್ ಪಟ್ಟಿಯಲ್ಲಿ ಯುವ ಬೌಲರ್ ಗಳೇ ಮುಂಚೂಣಿಯಲ್ಲಿದ್ದಾರೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಮತ್ತು ಡೆಲ್ಲಿ ಬೌಲರ್ ಆವೇಶ್ ಖಾನ್ ನಡುವೆ ಗರಿಷ್ಠ ವಿಕೆಟ್ ಟೇಕರ್ ಗೆ ಸಿಗುವ ಪರ್ಪಲ್ ಕ್ಯಾಪ್ ಗಾಗಿ ಪೈಪೋಟಿಯಿದೆ.

ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹರ್ಷಲ್ ಪಟೇಲ್ 12 ಪಂದ್ಯಗಳಿಂದ 26 ವಿಕೆಟ್ ಕಬಳಿಸಿದ್ದಾರೆ. ಆದರೆ ಈಗ ಆವೇಶ‍್ ಖಾನ್ ಕೂಡಾ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು 13 ಪಂದ್ಯಗಳಿಂದ 22 ವಿಕೆಟ್ ಕಬಳಿಸಿ ಹರ್ಷಲ್ ಗೆ ಪೈಪೋಟಿ ನೀಡುತ್ತಿದ್ದಾರೆ. ಆದರೆ ಡೆಲ್ಲಿಗೆ ಹೋಲಿಸಿದರೆ ಆರ್ ಸಿಬಿಗೆ ಹೆಚ್ಚಿನ ಪಂದ್ಯವಿದೆ. ಹೀಗಾಗಿ ಹರ್ಷಲ್ ಗೆ ಪರ್ಪಲ್ ಕ್ಯಾಪ್ ಉಳಿಸಿಕೊಳ್ಳಲು ಉತ್ತಮ ಅವಕಾಶವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ರಾಯಲ್ ಚಾಲೆಂಜರ್ಸ್ ಗೆ ಇಂದು ಔಪಚಾರಿಕ ಪಂದ್ಯ