ದುಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದಿನ ಪಂದ್ಯ ನಡೆಯಲಿದೆ.
ಇಷ್ಟು ಸಮಯ ಚಾಂಪಿಯನ್ ಆಗಿ ಮೆರೆಯುತ್ತಿದ್ದ ಮುಂಬೈಗೆ ಈ ಬಾರಿ ಬ್ಯಾಟಿಂಗ್ ಕೈಕೊಟ್ಟ ಪರಿಣಾಮ ಪ್ಲೇ ಆಫ್ ಕನಸು ಭಗ್ನಗೊಂಡಿದೆ. 12 ಪಂದ್ಯಗಳಿಂದ 5 ಗೆಲುವು ಕಂಡಿರುವ ಮುಂಬೈ 7 ನೇ ಸ್ಥಾನದಲ್ಲಿದೆ.
ಅತ್ತ ರಾಜಸ್ಥಾನ್ ಕೂಡಾ ಸಮಾನ ದುಃಖಿ. ಕಳೆದ ಪಂದ್ಯವನ್ನು ಗೆದ್ದಿರುವ ರಾಜಸ್ಥಾನ್ 12 ಪಂದ್ಯಗಳಿಂದ 5 ಗೆಲುವು ಕಂಡಿದೆ. ಆದರೆ ರನ್ ರೇಟ್ ಆಧಾರದಲ್ಲಿ 6 ನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯವನ್ನು ಗೆದ್ದರೆ ನಾಲ್ಕನೇ ಸ್ಥಾನದಲ್ಲಿರುವ ಕೆಕೆಆರ್ ಗೆ ಪೈಪೋಟಿ ನೀಡಬಹುದು. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.