Select Your Language

Notifications

webdunia
webdunia
webdunia
webdunia

ಐಪಿಎಲ್ 14: ಪ್ಲೇ ಆಫ್ ಗೇರಿದ ಆರ್ ಸಿಬಿ

ಐಪಿಎಲ್ 14: ಪ್ಲೇ ಆಫ್ ಗೇರಿದ ಆರ್ ಸಿಬಿ
ದುಬೈ , ಭಾನುವಾರ, 3 ಅಕ್ಟೋಬರ್ 2021 (19:30 IST)
ದುಬೈ: ಕಿಂಗ್ಸ್ ಪಂಜಾಬ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ರೋಚಕ 6 ರನ್ ಗಳ ಗೆಲುವು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತಕ್ಕೇರಿದೆ.


ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು. ದೇವದತ್ತ್ ಪಡಿಕ್ಕಲ್ 47, ಗ್ಲೆನ್ ಮ್ಯಾಕ್ಸ್ ವೆಲ್ 57 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಪಂಜಾಬ್ ಮತ್ತೆ ಕೊನೆಯ ಕ್ಷಣದಲ್ಲಿ ಸೋಲುವ ಚಾಳಿ ಮುಂದುವರಿಸಿತು. 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಸೋಲೊಪ್ಪಿಕೊಂಡಿತು. ಮಯಾಂಕ್ ಅಗರ್ವಾಲ್ 57 ರನ್ ಸಿಡಿಸಿದರು. ಆರ್ ಸಿಬಿ ಪರ ಯಜುವೇಂದ್ರ ಚಾಹಲ್ 3 ವಿಕೆಟ್ ತಮ್ಮದಾಗಿಸಿಕೊಂಡರು. ಈ ಮೂಲಕ ಮೂರನೇ ತಂಡವಾಗಿ ಆರ್ ಸಿಬಿ ಪ್ಲೇ ಆಫ್ ಹಂತಕ್ಕೇರಿತು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೋಚ್ ಗೆ ಹುಡುಕಾಟ ಶುರು