ದುಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಋತುರಾಜ್ ಗಾಯಕ್ ವಾಡ್ ಶತಕದ (60 ಎಸೆತಗಳಲ್ಲಿ ಅಜೇಯ 101) ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಕಲೆ ಹಾಕಿತು.
ಈ ಬೃಹತ್ ಮೊತ್ತ ಬೆನ್ನತ್ತಿ ರಾಜಸ್ಥಾನ್ ಆರಂಭ ಅಮೋಘವಾಗಿತ್ತು. ಕೇವಲ 5 ಓವರ್ ಗಳಲ್ಲೇ ವಿಕೆಟ್ ನಷ್ಟವಿಲ್ಲದೇ 75 ರನ್ ಬಂತು. ಯಶಸ್ವಿ ಜೈಸ್ವಾಲ್ 21 ಎಸೆತಗಳಿಂದ 50 ರನ್ ಸಿಡಿಸಿದರು. ಲೂಯಿಸ್ 12 ಎಸೆತಗಳಿಂದ 27 ರನ್ ಮಾಡಿದರು. ಈ ಭದ್ರ ಬುನಾದಿಯ ಮೇಲೆ ಹೊರಟ ರಾಜಸ್ಥಾನ್ ಗೆ ಕೊನೆಗೆ ಶಿವಂ ದುಬೆ 64 ಮತ್ತು ಸಂಜು ಸ್ಯಾಮ್ಸನ್ 28 ರನ್ ಗಳಿಸಿ ಗೆಲುವಿನತ್ತ ಕೊಂಡೊಯ್ದರು. ಇದರೊಂದಿಗೆ ರಾಜಸ್ಥಾನ್ 17.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಗೆಲುವು ಕಂಡಿತು.