Publish Date: Sat, 02 Oct 2021 (20:16 IST)
Updated Date: Sat, 02 Oct 2021 (20:18 IST)
ದುಬೈ: ಐಪಿಎಲ್ 14 ರ ಇಂದಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈಇಂಡಿಯನ್ಸ್ 4 ವಿಕೆಟ್ ಗಳ ಸೋಲುಂಡಿದೆ. ಇದರಿಂದಾಗಿ ಹಾಲಿ ಚಾಂಪಿಯನ್ಸ್ ಗೆ ಪ್ಲೇ ಆಫ್ ಹಾದಿ ಕಷ್ಟವಾಗಿದೆ.
ಇಂದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು. ಈ ಸುಲಭ ಮೊತ್ತ ಬೆನ್ನತ್ತಿದ ಡೆಲ್ಲಿ ಕೂಡಾ ಅಷ್ಟು ಸುಲಭವಾಗಿ ಗೆಲ್ಲಲಿಲ್ಲ. ಆರಂಭದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡು ಹೋಯಿತು.
ಆದರೆ ಮಧ‍್ಯಮ ಕ್ರಮಾಂಕದಲ್ಲಿ ನಾಯಕ ರಿಷಬ್ ಪಂತ್ 26, ಶ್ರೇಯಸ್ ಐಯರ್ ಔಟಾಗದೇ 33, ರವಿಚಂದ್ರನ್ ಅಶ್ವಿನ್ ಅಜೇಯ 20 ರನ್ ಗಳಿಸಿ ತಂಡಕ್ಕೆ 19.1 ಓವರ್ ಗಳಲ್ಲಿ ಗೆಲುವು ಕೊಡಿಸಿದರು. ಅಂತಿಮವಾಗಿ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.