Select Your Language

Notifications

webdunia
webdunia
webdunia
webdunia

ಐಪಿಎಲ್ 14: ಮುಂಬೈ ಇಂಡಿಯನ್ಸ್ ಗೆ ಕೈಕೊಟ್ಟ ಬ್ಯಾಟಿಂಗ್

ಐಪಿಎಲ್ 14: ಮುಂಬೈ ಇಂಡಿಯನ್ಸ್ ಗೆ ಕೈಕೊಟ್ಟ ಬ್ಯಾಟಿಂಗ್
ದುಬೈ , ಶನಿವಾರ, 2 ಅಕ್ಟೋಬರ್ 2021 (17:15 IST)
ದುಬೈ: ಐಪಿಎಲ್ 14 ರ ಇಂದಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 129 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.
Photo Credit: PTI


ಬಲಾಢ್ಯ ಬ್ಯಾಟಿಂಗ್ ಗೆ ಹೆಸರು ವಾಸಿಯಾಗಿರುವ ಮುಂಬೈ ತಂಡಕ್ಕೆ ಇಂದೂ ಕೂಡಾ ಮತ್ತೆ ಬ್ಯಾಟರ್ ಗಳು ಕೈಕೊಟ್ಟರು. ಇಷ್ಟು ದಿನ ಕಳಪೆ ಫಾರ್ಮ್ ನಿಂದಾಗಿ ಟೀಕೆಗೊಳಗಾಗಿದ್ದ ಸೂರ್ಯಕುಮಾರ್ ಯಾದವ್ ಇಂದು ಉತ್ತಮ ಆಟವಾಡಿ 33 ರನ್ ಗಳಿಸಿದರು. ಉಳಿದಂತೆ ಕ್ವಿಂಟನ್ ಡಿ ಕಾಕ್ 19, ರೋಹಿತ್ ಶರ್ಮಾ 7, ಸೌರಭ್ ತಿವಾರಿ 15, ಕಿರನ್ ಪೊಲ್ಲಾರ್ಡ್ 6, ಹಾರ್ದಿಕ್ ಪಾಂಡ್ಯ 17, ಜಯಂತ್ ಯಾದವ್ 11 ರನ್ ಗಳಿಸಿದರು.

ಇಂದೂ ಕೂಡಾ ಇಶಾನ್ ಕಿಶನ್ ರನ್ನು ಆಡುವ ಬಳಗದಿಂದ ಹೊರಗಿಡಲಾಗಿತ್ತು. ಅತ್ತ ಡೆಲ್ಲಿ ಪರ ಆವೇಶ್ ಖಾನ್ ಮತ್ತು ಅಕ್ಸರ್ ಪಟೇಲ್ ತಲಾ 3, ನೋರ್ಜೆ ಮತ್ತು ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಮಹಿಳಾ ಟೆಸ್ಟ್: ಬ್ಯಾಟಿಂಗ್ ಬಳಿಕ ಬೌಲಿಂಗ್ ನಲ್ಲೂ ಮಿಂಚಿದ ಭಾರತೀಯರು