ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೆಸರು ತೆರಿಗೆ ವಂಚಕರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಆಘಾತ ನೀಡಿದೆ.
ಅನೇಕ ಸೆಲೆಬ್ರಿಟಿಗಳು, ಉದ್ಯಮಿಗಳು ತೆರಿಗೆ ವಂಚನೆ ಮಾಡುವ ಕುರಿತಂತೆ ಮಾಹಿತಿ ನೀಡುವ ಪಂಡೋರಾ ಪೇಪರ್ಸ್ ಎಂಬ ರಹಸ್ಯ ಹಣಕಾಸು ಮಾಹಿತಿಯಿಂದ ಇದು ಬಹಿರಂಗವಾಗಿದೆ.
ಸಚಿನ್ ತೆಂಡುಲ್ಕರ್ ಅಲ್ಲದೆ, 300 ಕ್ಕೂ ಹೆಚ್ಚು ಭಾರತೀಯರು ರಹಸ್ಯ ಹೂಡಿಕೆಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್ ಪರ ವಕೀಲರು ತೆಂಡುಲ್ಕರ್ ಎಲ್ಲಾ ಹೂಡಿಕೆಗಳನ್ನು ನ್ಯಾಯಯುತವಾಗಿಯೇ ಮಾಡಿದ್ದಾರೆ ಎಂದಿದ್ದಾರೆ. ಭಾರತ ಮಾತ್ರವಲ್ಲದೆ, ವಿದೇಶದ ಹಲವು ಗಣ್ಯರ ಹೆಸರೂ ಈ ರಹಸ್ಯ ಮಾಹಿತಿಯಲ್ಲಿ ಹೊರಬಿದ್ದಿದೆ.