Publish Date: Fri, 24 Sep 2021 (12:07 IST)
Updated Date: Fri, 24 Sep 2021 (09:43 IST)
ಚೆನ್ನೈ: ಕ್ರಿಕೆಟ್ ನಲ್ಲಿ ತಮ್ಮ ವೃತ್ತಿ ಬದುಕು ಪುನರಾರಂಭ ಮಾಡುವ ಕನಸು ನನಸು ಮಾಡಲಾಗದೇ ಕ್ರಿಕೆಟಿಗ ಶ್ರೀಶಾಂತ್ ಈಗ ಸಿನಿಮಾದತ್ತ ಹೊರಳಿದ್ದಾರೆ.
ಹಿಂದೆ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಶ್ರೀಶಾಂತ್ ಗೆ ಯಶಸ್ಸು ಸಿಕ್ಕಿರಲಿಲ್ಲ. ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೀಗ ತಮಿಳು ನಟ ವಿಜಯ್ ಸೇತುಪತಿ ಭೇಟಿ ಮಾಡಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಈ ಮೂಲಕ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ವಿಜಯ್ ಸೇತುಪತಿಯನ್ನು ಹಾಡಿಹೊಗಳಿರುವ ಶ್ರೀಶಾಂತ್ ಮುಂದೆ ಅವರ ಜೊತೆ ಸಿನಿಮಾ ಮಾಡಬಹುದು ಎನ್ನಲಾಗಿದೆ. ಈ ಬಗ್ಗೆ ಇನ್ನೂ ಅವರ ಅಧಿಕೃತ ಮಾಹಿತಿ ನೀಡಿಲ್ಲ.