Publish Date: Fri, 24 Sep 2021 (09:38 IST)
Updated Date: Fri, 24 Sep 2021 (09:39 IST)
ಹೈದರಾಬಾದ್: ಇತ್ತೀಚೆಗೆ ನಟ ನಾಗ ಚೈತನ್ಯ ಹಾಗೂ ಸಮಂತಾ ದಂಪತಿ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿಗಳು ಜೋರಾಗಿ ಹರಿದಾಡಿತ್ತು. ಸಮಂತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿತ್ತು.
ಆದರೆ ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಗುಟ್ಟನ್ನು ಹೊರಗೆ ಹೇಳಿಕೊಂಡಿಲ್ಲ. ಇತ್ತೀಚೆಗೆ ಸಮಂತಾರನ್ನು ಪರ್ತಕರ್ತರು ಈ ಬಗ್ಗೆ ಪ್ರಶ್ನಿಸಿದಾಗಲೂ ಆಕೆ ಸಿಟ್ಟಿಗೆದ್ದಿದ್ದರು.
ಆದರೆ ಈಗ ನಾಗ ಚೈತನ್ಯ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ವಿವಾದದ ಬಗ್ಗೆ ಮಾತನಾಡಿದ್ದಾರೆ. ನಾನು ಯಾವತ್ತೂ ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಮಿಕ್ಸ್ ಮಾಡಲ್ಲ. ಎರಡನ್ನೂ ಸಮತೋಲನವಾಗಿ ನೋಡಿಕೊಳ್ಳಬೇಕು ಎಂಬುದನ್ನು ಹೆತ್ತವರಿಂದ ಕಲಿತಿದ್ದೇನೆ. ಆದರೆ ದುರದೃಷ್ಟವಶಾತ್ ಇತ್ತೀಚೆಗೆ ಮಾಧ್ಯಮಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಮ್ಮ ಪ್ರತಿಯೊಂದು ವಿಚಾರಗಳೂ ಸುದ್ದಿಯಾಗುತ್ತಿವೆ. ಆದರೆ ಜನ ನಿಜ ಸುದ್ದಿಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.