Select Your Language

Notifications

webdunia
webdunia
webdunia
webdunia

‘ಮೈಸೂರು’ ನಲ್ಲೊಂದು ಮ್ಯೂಸಿಕಲ್ ಲವ್ ಸ್ಟೋರಿ

‘ಮೈಸೂರು’ ನಲ್ಲೊಂದು ಮ್ಯೂಸಿಕಲ್ ಲವ್ ಸ್ಟೋರಿ
ಬೆಂಗಳೂರು , ಶುಕ್ರವಾರ, 24 ಸೆಪ್ಟಂಬರ್ 2021 (09:30 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಸಾಕಷ್ಟು ಹೊಸಬರ ಸಿನಿಮಾಗಳು ಸದ್ದಿಲ್ಲದೇ ಸೆಟ್ಟೇರುತ್ತಿವೆ. ಇದೀಗ ಅಂತಹದ್ದೇ ಹೊಸ ಪ್ರಯತ್ನವೊಂದನ್ನು ಎಸ್. ಆರ್ ಕಂಬೈನ್ಸ್ ಸಂಸ್ಥೆ ಮಾಡಿದೆ.


ಕಿರುತೆರೆಯಲ್ಲಿ ಕೆಲಸ ಮಾಡಿದ ಅನುಭವವಿರುವ ವಾಸುದೇವ ರೆಡ್ಡಿ ‘ಮೈಸೂರು’ ಎನ್ನುವ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕತೆ, ಚಿತ್ರಕತೆಯೂ ಅವರದ್ದೇ.  ತೆಲುಗು, ಬಂಗಾಳಿ ಚಿತ್ರಗಳಲ್ಲಿ ನಟಿಸಿದ್ದ ಸಂವಿತ್ ಎಂಬವರು ಮೊದಲ ಬಾರಿಗೆ ಕನ್ನಡದಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಪೂಜಾ ಚಿತ್ರದ ನಾಯಕಿ. ಇವರಲ್ಲದೆ, ಜ್ಯೂ. ನರಸಿಂಹರಾಜು, ಹಿರಿಯ ನಟ ಸತ್ಯಜಿತ್, ಖ್ಯಾತ ಹಾಸ್ಯ ಕಲಾವಿದ ಕುರಿ ಪ್ರತಾಪ್, ‘ಗಟ್ಟಿಮೇಳ’ ಧಾರವಾಹಿ ಖ್ಯಾತಿಯ ರವಿಕುಮಾರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಅನಿವಾಸಿ ಕನ್ನಡಿಗನ ಪ್ರೇಮಕತೆ ಚಿತ್ರದಲ್ಲಿರಲಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದೆ. ಸಿನಿಮಾದ ಪೋಸ್ಟರ್ ಗಳು ಕುತೂಹಲ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ವಿಜಯ್ ಅಭಿನಯದ ಪುಕ್ಸಟೆ ಲೈಫ್ ಬಿಡುಗಡೆ