Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿಯ ಉಡುಪಿ ನಿವಾಸಕ್ಕೆ ಭೇಟಿ ನೀಡಿದ ಅನಂತ್ ನಾಗ್

ರಕ್ಷಿತ್ ಶೆಟ್ಟಿಯ ಉಡುಪಿ ನಿವಾಸಕ್ಕೆ ಭೇಟಿ ನೀಡಿದ ಅನಂತ್ ನಾಗ್
ಬೆಂಗಳೂರು , ಶುಕ್ರವಾರ, 24 ಸೆಪ್ಟಂಬರ್ 2021 (08:55 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯೆಂದರೆ ಹಿರಿಯ ನಟ ಅನಂತ್ ನಾಗ್ ಗೆ ಒಂದು ರೀತಿಯಲ್ಲಿ ಅಚ್ಚುಮೆಚ್ಚು. ರಕ್ಷಿತ್ ಗೂ ಅನಂತ್ ನಾಗ್ ಎಂದರೆ ವಿಶೇಷ ಗೌರವವಿದೆ.

 

ಇದೀಗ ಉಡುಪಿಯಲ್ಲಿ ಶೂಟಿಂಗ್ ನಲ್ಲಿರುವ ಅನಂತ್ ನಾಗ್ ಅಲ್ಲಿನ ರಕ್ಷಿತ್ ಶೆಟ್ಟಿ ಮನೆಗೆ ಪತ್ನಿ ಸಮೇತ ಭೇಟಿ ನೀಡಿದ್ದಾರೆ. ರಕ್ಷಿತ್ ಸಹೋದರ ರಂಜಿತ್ ಶೆಟ್ಟಿ ಮತ್ತು ಕುಟುಂಬದವರೊಂದಿಗೆ ಅನಂತ್ ನಾಗ್ ದಂಪತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಬ್ರಕಡಬ್ರ ಸಿನಿಮಾ ಶೂಟಿಂಗ್ ಗಾಗಿ ಅನಂತ್ ನಾಗ್ ಉಡುಪಿಯಲ್ಲಿದ್ದಾರೆ. ತಮ್ಮ ಪಾಲಿನ ಶೂಟಿಂಗ್ ಮುಗಿದ ಬಳಿಕ ರಕ್ಷಿತ್ ಮನೆಗೆ ಭೇಟಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯನ್ ರಾಜ್ ಸರ್ಜಾನಿಗೆ 11 ತಿಂಗಳು: ಕ್ಯೂಟ್ ವಿಡಿಯೋ ಶೇರ್ ಮಾಡಿದ ಮೇಘನಾ