Publish Date: Mon, 13 Sep 2021 (09:20 IST)
Updated Date: Mon, 13 Sep 2021 (09:34 IST)
ದುಬೈ: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14 ರ ಎರಡನೇ ಭಾಗದ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬಲ ಸಿಗಲಿದೆ.
2014 ರಿಂದ ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರನಾಗಿರುವ ತೆಂಡುಲ್ಕರ್ ಇದೀಗ ದುಬೈಗೆ ತೆರಳಲಿದ್ದು, ಆರು ದಿನ ಕ್ವಾರಂಟೈನ್ ಮುಗಿಸಿ ಆಟಗಾರರನ್ನು ಭೇಟಿಯಾಗಲಿದ್ದಾರೆ. ತಂಡದ ಆಟಗಾರರಿಗೆ ಸಚಿನ್ ಅಮೂಲ್ಯ ಸಲಹೆ ನೀಡಲಿದ್ದಾರೆ.
ವಿಶೇಷವೆಂದರೆ ಮುಂಬೈ ತಂಡದಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ಕೂಡಾ ಆಟಗಾರನಾಗಿದ್ದು, ಅಪ್ಪ-ಮಗ ಜೋಡಿ ಒಂದೇ ತಂಡದಲ್ಲಿ ಒಟ್ಟಿಗೇ ಕಾರ್ಯನಿರ್ವಹಿಸಲಿರುವುದು ಮುಖ್ಯವಾಗಲಿದೆ.