Select Your Language

Notifications

webdunia
webdunia
webdunia
webdunia

ಐಪಿಎಲ್ 14: ಶ್ರೇಯಸ್ ವಾಪಸಾದರೂ ಡೆಲ್ಲಿಗೆ ರಿಷಬ್ ನಾಯಕ

webdunia
ನವದೆಹಲಿ , ಭಾನುವಾರ, 5 ಸೆಪ್ಟಂಬರ್ 2021 (09:12 IST)
ನವದೆಹಲಿ: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14 ರ ಉಳಿದ ಭಾಗದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರಿರಬಹುದು ಎಂಬ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ.


ಮೊದಲ ಭಾಗದಲ್ಲಿ ಶ್ರೇಯಸ್ ಐಯರ್ ಗಾಯದಿಂದಾಗಿ ಹೊರಗುಳಿದಿದ್ದಾಗ ರಿಷಬ್ ಪಂತ್ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು. ನಾಯಕರಾಗಿ ಅವರ ಪರ್ಫಾರ್ಮೆನ್ಸ್ ಎಲ್ಲರ ಗಮನ ಸೆಳೆದಿತ್ತು.

ಹೀಗಾಗಿ ಡೆಲ್ಲಿ ಫ್ರಾಂಚೈಸಿ 14 ನೇ ಆವೃತ್ತಿಯ ಉಳಿದ ಪಂದ್ಯಗಳಿಗೂ ರಿಷಬ್ ರನ್ನೇ ನಾಯಕರಾಗಿ ಮುಂದುವರಿಸಲು ತೀರ್ಮಾನಿಸಿದೆ. ಶ್ರೇಯಸ್ ಫಿಟ್ ಆಗಿ ತಂಡಕ್ಕೆ ಮರಳಿದರೂ ರಿಷಬ್ ಗೆ ಆದ್ಯತೆ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಕೆಂಡ್ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್