ದುಬೈ: ಐಪಿಎಲ್ 14 ರಲ್ಲಿ ಪ್ಲೇ ಆಫ್ ಹಂತಕ್ಕೇರಿರುವ ಆರ್ ಸಿಬಿಗೆ ಈ ಬಾರಿ ಕಪ್ ಗೆಲ್ಲಲು ಒಳ್ಳೆಯ ಅವಕಾಶ ಎದುರಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಉತ್ತಮ ವಿದಾಯ ಹೇಳಬಹುದು.
ಆದರೆ ಆರ್ ಸಿಬಿಗೆ ಎರಡನೇ ಹಂತದಲ್ಲಿ ತಲೆನೋವಾಗಿರುವುದು ಎಬಿಡಿ ವಿಲಿಯರ್ಸ್ ಫಾರ್ಮ್. ಎಬಿಡಿ ಸಿಡಿದರೆ ಆರ್ ಸಿಬಿಯನ್ನು ತಡೆಯುವವರು ಯಾರೂ ಇರಲ್ಲ.
ಯಾಕೆಂದರೆ ಮ್ಯಾಕ್ಸ್ ವೆಲ್, ದೇವದತ್ತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಈಗಾಗಲೇ ನಿರ್ಣಾಯಕ ಇನಿಂಗ್ಸ್ ಆಡಿದ್ದಾರೆ. ಇವರ ಹೊರತಾಗಿ ಯುವ ಆಟಗಾರ ಭರತ್ ಕೂಡಾ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಇದೆಲ್ಲವೂ ಆರ್ ಸಿಬಿಗೆ ಪ್ಲಸ್ ಪಾಯಿಂಟ್. ಎಲ್ಲವೂ ಅಂದುಕೊಂಡಂತೇ ಆದರೆ ಆರ್ ಸಿಬಿಗೆ ಕಪ್ ಗೆಲ್ಲುವ ಸುವರ್ಣಾವಕಾಶವಿದೆ.